ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ: ಹೆಚ್.ಡಿ.ಕೆ

 ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ: ಹೆಚ್.ಡಿ.ಕೆ

ಕೆ.ಆರ್.ಪೇಟೆ: ಹಿಂದಿನ ಕಾಲದಿಂದಲೂ ದೇವರು ಎಂದರೆ ಎಲ್ಲರೂ ಭಯ ಭಕ್ತಿಯಿಂದ ಪೂಜಿಸುತ್ತಾ ಬರುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸತ್ಯ ಧರ್ಮ ನಂಬಿಕೆ ಎಂಬುವುದು ಗಾಳಿಯಲ್ಲಿ ತೂರಿ ಹೋಗುತ್ತಿದ್ದೀಯಾ ಎಂದು ನಮ್ಮೆಲ್ಲರಿಗೂ ಭಯ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಅವರು ಇಂದು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೋಟೆ ರಂಗನಾಥಸ್ವಾಮಿ ವಿಮಾನ ಗೋಪುರ ಮತ್ತು ಗರುಡಗಂಭ ಪ್ರತಿಷ್ಟಾಪನಾ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿಮ್ಮಂಥ ಲಕ್ಷಾಂತರ ಕಾರ್ಯಕರ್ತರು ನೀಡುವ ಪ್ರೀತಿ, ಅಭಿಮಾನ, ಆಶೀರ್ವಾದದಿಂದ ನಾನು ಬದುಕಿದ್ದೇನೆ ಆ ಭಗವಂತನಲ್ಲಿ ಏನೋ ಶಕ್ತಿ ಇದೆ ಹಿಂದೆ ಬಸ್, ವಿದ್ಯುತ್, ಶಾಲೆಗಳ ಸೌಕರ್ಯ ಇರಲಿಲ್ಲ ಆದರೆ ಇಂದು ಎಲ್ಲಾ ಸೌಲಭ್ಯಗಳಿದ್ದರೂ ಜನರಲ್ಲಿ ಸತ್ಯ, ಧರ್ಮ ಎಂಬುದು ಅವಸಾನದ ಅಂಚಿನಲ್ಲಿದೆ ಆಗ ಹಳ್ಳಿಗಳಲ್ಲಿ ಜಗಳ, ಹೊಡೆದಾಟಗಳು ನಡೆಯುತ್ತಿರಲಿಲ್ಲ ಆದರೆ ಇಂದು ಎಲ್ಲದಕ್ಕೂ ವೈಮನಸ್ಸು, ಹೋರಾಟ ನಡೆಸಲಾಗುತ್ತಿದೆ. ಇಂದಿನ ಯುವಕರು ಹಿರಿಯರಿಗೆ ಗೌರವ ನೀಡಬೇಕು ಸಮಾಜದಲ್ಲಿ ನೆಮ್ಮದಿಯ, ಸಹಬಾಳ್ವೆಯ ಜೀವನ ಸಾಗಿಸಬೇಕು.

ಕಳೆದ 2-3 ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ನನಗೆ ಬೇಸರ ತರಿಸಿದೆ. ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಸರ್ಕಾರವೂ ಬೆಂಬಲ ಬೆಲೆ ನೀಡುತ್ತಿಲ್ಲ. ರೈತರನ್ನು ಉಳಿಸುವ ಕೆಲಸಗಳನ್ನು ಸರ್ಕಾರ ಮಾಡುತ್ತಿಲ್ಲ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ನೀವೇ ಕಾಣಲಿದ್ದೀರಿ. ಅಕ್ಕಿಗೆ ಬೇಡಿಕೆ ಬರಲಿದ್ದು ನೀವು ಬೆಳೆದ ಭತ್ತವನ್ನು ತಕ್ಷಣವೇ ಮಾರಾಟ ಮಾಡಬೇಡಿ. ಸ್ವಲ್ಪದಿನ ಕಾಯಿರಿ ಉತ್ತಮ ಬೆಲೆ ದೊರೆಯಲಿದೆ ಗೃಹಲಕ್ಷ್ಮಿ ಹಣ ಇನ್ನೂ ಹಲವಾರು ಮಹಿಳೆಯರಿಗೆ ತಲುಪಿಲ್ಲ ಸರ್ಕಾರದಲ್ಲಿ ಹಣವಿಲ್ಲ ಅಭಿವೃದ್ಧಿಗೆ ಹಣ ನೀಡದೇ ಕೇವಲ ಬೂಟಾಟಿಕೆ ಆಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೇಶಕ ಡಾಲುರವಿ, ಪ್ರಥಮದರ್ಜೆ ಗುತ್ತಿಗೆದಾರ ಎ.ಆರ್.ರಘು, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮಾತನಾಡಿದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್, ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

Related