ಮೆಟ್ರೋ ಸಂಚಾರ ಇಲ್ಲ

ಮೆಟ್ರೋ ಸಂಚಾರ ಇಲ್ಲ

ಬೆಂಗಳೂರು; ನಗರದಲ್ಲಿ ಮೆಟ್ರೋ ಸಂಚಾರ ಸದ್ಯಕ್ಕೆ ಆರಂಭವಾಗುತ್ತಿಲ್ಲ. ಮೇ ೩೧ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ಕೊರೋನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ೪.೦ ಜಾರಿಯಲ್ಲಿದ್ದು, ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರ ಶುರುವಾಗಿದೆ. ಆದರೆ, ಮೆಟ್ರೋ ಸಂಚಾರಕ್ಕೆ ಇರುವ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ. ೧೮ ಮೇ ೨೦೨೦ ರಿಂದ ೩೧ ಮೇ ೨೦೨೦ ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ ೩೧ರ ನಂತರ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿದರೂ, ಕೆಲವು ನಿಯಮಗಳನ್ನು ಹಾಕಲಾಗಿದೆ. ಒಂದು ರೈಲಿನಲ್ಲಿ ಕಡಿಮೆ ಪ್ರಯಾಣಿಕರಿರಬೇಕು, ಎಲ್ಲ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಸೇರಿದಂತೆ ಕೊರೋನಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ಕಡ್ಡಾಯ ಮಾಡುವ ಚಿಂತನೆಯೂ ನಡೆದಿದೆ. ಟೋಕನ್ ಒಬ್ಬರ ಕೈಯಿಂದ ಮತ್ತೊಬ್ಬರಿಗೆ ಹೋಗುತ್ತಿದ್ದು, ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ. ಕೊರೋನಾದಿಂದ ದೂರ ಇರಲು ಸ್ಮಾರ್ಟ್ ಕಾರ್ಡ್ ಬಳಸುವುದು ಉತ್ತಮವಾಗಿದೆ. ಮೆಟ್ರೋ ಸಂಚಾರದ ಶುರು ಮಾಡುವ ಬಗ್ಗೆ ಅಧಿಕೃತ ದಿನಾಂಕ ಇನ್ನು ನಿಗದಿಯಾಗಿಲ್ಲ. ಆದರೆ, ಮೇ ೩೧ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ.

Related