ಈ ಬಾರಿ ಹೊಸ ವರ್ಷಕ್ಕೆ ನೋ ಕಂಡಿಶನ್

ಈ ಬಾರಿ ಹೊಸ ವರ್ಷಕ್ಕೆ ನೋ ಕಂಡಿಶನ್

ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಇಡೀ ದೇಶದಾದ್ಯಂತ ಕೋವಿಡ್ ಇದ್ದ ಕಾರಣ ಹೊಸ ವರ್ಷ ಆಚರಣೆಗೆ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗಿತ್ತು.

ಆದರಿಗ ದೇಶ, ರಾಜ್ಯದಲ್ಲಿ ಯಾವುದೇ ರೀತಿಯ ಕೋವಿಡ್ ಇಲ್ಲದ ಕಾರಣ ರಾಜ್ಯದಲ್ಲಿ ಈ ವರ್ಷ ಹೊಸ ವರ್ಷ ಆಚರಣೆಗೆ ಯಾವುದೇ ನಿಯಮವಿಲ್ಲವೆಂದು ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಹೇಳಿದ್ದಾರೆ

ಹೌದು, 2024ರ ಹೊಸ ವರ್ಷಕ್ಕೆ ಈ ಬಾರಿ ಯಾವುದೇ ಕಂಡೀಷನ್ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಹೊಸ ವರ್ಷಕ್ಕೆ ಯಾವದೇ ಕಂಡೀಷನ್ ಇಲ್ಲ. ಕಳೆದ ಬಾರಿಯೂ ಯಾವದೇ ಕಂಡೀಷನ್ ಇರಲಿಲ್ಲ. ಈ ಬಾರಿಯೂ ಯಾವದೇ ನಿರ್ಬಂಧ ಇರೋದಿಲ್ಲ. 2022 ರಲ್ಲಿ ಕೋವಿಡ್ ಕಾರಣದಿಂದ ನಿರ್ಬಂಧ ಹಾಕಲಾಗಿತ್ತು. ಈ ಬಾರಿಯೂ ಎಲ್ಲಾ ನಿರ್ಬಂಧಗಳು ಸಡಿಲಿಕೆ ಮಾಡುತ್ತೇವೆ. ಸುರಕ್ಷತೆಗೆ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸುತ್ತಾರೆ.

ಹೊಸ ವರ್ಷ ಸಂಭ್ರಮಾಚರಣೆ ನಿರ್ಬಂಧಗಳನ್ನ ಪೊಲೀಸ್ ಕಮಿಷನರ್ ತಿಳಿಸುತ್ತಾರೆ. ಹೊಸ ವರ್ಷಕ್ಕೆ ಬಿಬಿಎಂಪಿ ಯಿಂದ ಕಂಡೀಷನ್ ಇಲ್ಲ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.

Related