ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ವಿವಾಹ..

  • In Cinema
  • July 20, 2022
  • 251 Views
ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ವಿವಾಹ..

ಬಹುಭಾಷಾ ನಟಿ ನಿತ್ಯಾ ಮೆನನ್ ಹೊಸ ಬಾಳಿಗೆ ಕಾಲಿಡಲು ಸಿದ್ಧರಾಗಿದ್ದಾರೆ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಸದ್ಯ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದ ಚೆಲುವೆ ಕೈಯಲ್ಲಿರೋ ಸಿನಿಮಾಗಳನ್ನು ಮಾಡಿ ಮುಗಿಸಲು ತರ್ಮಾನಿಸಿದ್ದಾರಂತೆ.

ಅಂದಹಾಗೆ ಮಲಯಾಳಂ ಹೀರೊ ಜೊತೆ ನಿತ್ಯಾ ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ. ‘ಮೈನಾ’ ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಹತ್ತಿರವಾದ ನಟಿ ನಿತ್ಯಾ ಮೆನನ್ ಮುಂದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಸಕ್ಸಸ್ ಕಂಡರು. ಬೆಂಗಳೂರಿನಲ್ಲಿ ಕೇರಳ ಮೂಲದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್ ಇಲ್ಲೇ ಶಿಕ್ಷಣ ಮುಗಿಸಿದ್ದರು. ಕನಸು ಕಂಡಿದ್ದ ಕ್ಯೂಟಿ ಅಚಾನಕ್ ಆಗಿ ಬಣ್ಣದಲೋಕಕ್ಕೆ ಕಾಲಿಟ್ಟರು. ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಇತ್ತೀಚೆಗೆ ‘ಭೀಮ್ಲಾ ನಾಯಕ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ಗೆ ಜೋಡಿಯಾಗಿ ನಟಿಸಿ, ಗಮನ ಸೆಳೆದಿದ್ದರು.

ನಿತ್ಯಾ ಮೆನನ್ ಲವ್ವಿ ಡವ್ವಿ, ಡೇಟಿಂಗ್ ಗಾಸಿಪ್ಗಳಿಂದ ದೂರವೇ ಉಳಿದಿದ್ದರು. ಆದರೆ ಈಗ ಮಲಯಾಳಂ ಹೀರೊ ಜೊತೆ ಮದುವೆ ಆಗ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಈ ಬಗ್ಗೆ ಆಂಗ್ಲ ಪತ್ರಿಯೊಂದರಲ್ಲಿ ಸುದ್ದಿ ಪ್ರಕಟವಾಗಿದೆ. ಬಹಳ ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದು, ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರಂತೆ. ಇಬ್ಬರ ಮದುವೆಗೆ ಪೋಷಕರಿಂದಲೂ ಒಪ್ಪಿಗೆ ಸಿಕ್ಕಿದೆಯಂತೆ. ಆ ನಟ ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದು, ಆತ ಕನ್ನಡಿಗರಿಗೂ ಚಿರಪರಿಚಿತ ಅನ್ನೋ ವಿಚಾರ ಈಗ ಭಾರೀ ಕುತೂಹಲ ಕೆರಳಿಸಿದೆ.

Related