ಮುಂಬೈ: ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವಂತಹ ರಿಲಯನ್ಸ್ ಗ್ರೂಪ್ ನ ಮುಖ್ಯಸ್ಥರಾಗಿರುವಂತಹ ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ರಿಲಾಯನ್ಸ್ ಬೋರ್ಡ್ನಿಂದ ಕೆಳಗಿಳಿದಿದ್ದಾರೆ.
ಅವರ 3 ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಬೋರ್ಡ್ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಈ ಮೂವರೂ ಕೂಡ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳಾಗಲಿದ್ದಾರೆ. ಇನ್ನು, ನೀತಾ ಅಂಬಾನಿ ಅವರು ರಿಲಾಯನ್ಸ್ ಫೌಂಡೇಶನ್ನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಈ ವಿಚಾರಗಳನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಇಂದು ಹೇಳಿಕೆ ಮೂಲಕ ತಿಳಿಸಿದೆ.