ನಿರ್ಭಯಾ ಪ್ರಕರಣಕ್ಕೆ 8 ವರ್ಷ; ಹೋರಾಟ ನಿರಂತರ

ನಿರ್ಭಯಾ ಪ್ರಕರಣಕ್ಕೆ 8 ವರ್ಷ; ಹೋರಾಟ ನಿರಂತರ

ನವದೆಹಲಿ: ನಿರ್ಭಯಾ ಪ್ರಕರಣಕ್ಕೆ ಇಂದು ಎಂಟು ವರ್ಷ. ನನ್ನ ಮಗಳ ಸಾವಿಗೆ ನ್ಯಾಯ ದೊರಕಿತು ಎಂದ ಮಾತ್ರಕ್ಕೆ ನಾನು ಸುಮ್ಮನೇ ಕೂರುವುದಿಲ್ಲ. ಮೌನ ವಹಿಸುವುದಿಲ್ಲ. ಅತ್ಯಾಚಾರ ಸಂತ್ರಸ್ಥರ ಪರ ನನ್ನ ಹೋರಾಟ ಹೋರಾಟ ಮುಂದುವರೆಯಲಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದರು.

ಅತ್ಯಚಾರ ಸಂತ್ರಸ್ಥರ ಪರ ದನಿಯಾಗುವುದರ ಮೂಲಕ ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಲು ದನಿ ಎತ್ತಿದ ಪ್ರತಿಯೊಬ್ಬರಿಗೂ ಈ ಮೂಲಕ ಗೌರವ ಸಲ್ಲಿಸುತ್ತೇನೆ.

ನಾನು 8 ವರ್ಷದ ಹಿಂದೆಯೇ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಅತ್ಯಾಚಾರ ಸಂತ್ರಸ್ತರ ಪರ ಹೋರಾಡಬೇಕು ಎಂದು ಅಂದುಕೊಂಡತೆ ನನ್ನ ಹೋರಾಟ ಕೊನೆಯುಸಿರಿನವರೆಗೂ ಮುಂದುವರೆಯಲಿದೆ ಎಂದು ಹೇಳಿದರು.

2012ರ ಡಿಸೆಂಬರ್ 16ರ ರಾತ್ರಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಲಾಗಿತ್ತು. ಚಲಿಸುತ್ತಿದ್ದ ಬಸ್ ನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಕ್ರೂರವಾಗಿ ಹಿಂಸಿಸಲಾಗಿತ್ತು. ಆಕೆಯ ಮಮಾರ್ಂಗಕ್ಕೆ ರಾಡ್ ಗಳನ್ನು ತುರುಕಿ, ಗಾಜಿನ ಬಿಯರ್ ಬಾಟಲಿಗಳನ್ನು ಹಾಕಲಾಗಿತ್ತು. ಬಳಿಕ ಸಂತ್ರಸ್ಥೆ ನಿರ್ಭಯಾ ಆಸ್ಪತ್ರೆಯಲ್ಲಿ ಅಸು ನೀಗಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆಯ ಬಳಿಕ ನಾಲ್ಕು ಮಂದಿ ತಪ್ಪಿತಸ್ಥರನ್ನು ಗಲ್ಲಿಗೇರಿಸಲಾಗಿತ್ತು.

Related