ಕಳಪೆ ಕಾಮಗಾರಿ; ನೀರಿನ ಟ್ಯಾಂಕ್ ನೆಲಸಮ

ಕಳಪೆ ಕಾಮಗಾರಿ; ನೀರಿನ ಟ್ಯಾಂಕ್ ನೆಲಸಮ

ನೆಲಮಂಗಲ: ಇಲ್ಲಿನ ಬಿದಲೂರು ಗ್ರಾಮದಲ್ಲಿರುವ ಬೃಹತ್ ಓವರ್ ಹೆಡ್ ಟ್ಯಾಂಕ್ ನೆಲಸಮವಾಗಿದ್ದು, ಪಂಚಾಯತ್ ರಾಜ್ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲಮಂಗಲದ ಬಿದಲೂರು ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಭಾರೀ ಗಾತ್ರದ ಓವರ್ ಹೆಡ್ ಟ್ಯಾಂಕ್ ಸುಮಾರು 50 ಸಾವಿರ ಲೀಟರ್ ಸಾಮಥ್ರ್ಯ ಹೊಂದಿದೆ. ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಐದು ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯತ್ ಸದಸ್ಯ ರವಿಕುಮಾರ್ ಎಂಬುವರಿಂದ ನಿರ್ಮಾಣವಾಗಿದ್ದ ಟ್ಯಾಂಕ್ ಕಳಪೆ ಕಾಮಗಾರಿಯಿಂದ ಕೂಡಿರುವುದೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related