‘ಬಾಲಿವುಡ್ ನಟ’ ಮನೆ ಮೇಲೆ NCB ರೈಡ್

‘ಬಾಲಿವುಡ್ ನಟ’ ಮನೆ ಮೇಲೆ NCB ರೈಡ್

ಮುಂಬೈ : ಮುಂಬೈನ ನಟ ಅರ್ಜುನ್ ರಾಂಪಾಲ್ ಅವರ ನಿವಾಸದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಾಳಿ ನಡೆಸಿದ್ದಾರೆ. ಈ ಮೂಲಕ ಮಾದಕ ದ್ರವ್ಯ ಪ್ರಕರಣದಲ್ಲಿ ಮತ್ತೊಬ್ಬ ನಟ ಅರ್ಜುನ್ ರಾಂಪಾಲ್ ಬಂಧನದ ಭೀತಿಯನ್ನು ಎದುರಿಸುವಂತಾಗಿದೆ.

ಮಾದಕ ವಸ್ತು ಪ್ರಕರಣದಲ್ಲಿ ಈಗಾಗಲೇ ನಾರ್ಕೊಟಿಕ್ಸ್ ಕಂಟ್ರೋಲ್ ನ ಅಧಿಕಾರಿಗಳು ನಟ ಅರ್ಜುನ್ ರಾಂಪಾಲ್ ಅವರ ಗರ್ಲ್ ಫ್ರೆಂಡ್ ಗ್ಯಾಬ್ರಿಯೆಲ್ಲಾ ಸಹೋದರ ಆಗಿಸಿಲಾವೋಸ್ ಡೆಮೆಟ್ರಿಯಾಡೆಸ್ ಅನ್ನು ಬಂಧಿಸಿದ್ದರು. ಇಂತಹ ಬಂಧಿತನಿಂದ ಮಾಹಿತಿಯನ್ನು ಆಧರಿಸಿ, ಇದೀಗ ನಟ ರಾಂಪಾಲ್ ಅವರ ನಿವಾಸದ ಮೇಲೆ ಎನ್ ಸಿ ಬಿ ಪೊಲೀಸರು ದಾಳಿ ನಡೆಸಿದ್ದಾರೆ.

Related