ಸಂಡೂರು: ಪಟ್ಟಣದ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣೆ ಮಾಸಾಚರಣೆ ತಾಲೂಕು ಮಟ್ಟದ ಉದ್ಘಾಟನಾ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಕೆ.ಪ್ರೇಮ್ ಮೂರ್ತಿ ಭಾಗವಹಿಸಿ ಮಾತನಾಡಿ ಪೋಷಣೆ ಮಾಸಾಚರಣೆ ಒಂದು ತಿಂಗಳ ಅವಧಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಯಾವ ರೀತಿ ಆಚರಿಸಬೇಕು ಜನರಿಗೆ ಯೋಜನೆಯ ಪ್ರಾಮುಖ್ಯತೆ ಕಾರ್ಯಕ್ರಮಗಳ ಉದ್ದೇಶ ಮಕ್ಕಳು ಮತ್ತು ಅಪೌಷ್ಠಿಕ ಮಕ್ಕಳು ಗರ್ಭಿಣಿಯರಿಗೆ ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.