ಆರ್ಥಿಕವಾಗಿ ಸದೃಢರಾಗಲು ನರೇಗಾ ಯೋಜನೆ ಸಹಕಾರಿ

  • In State
  • August 9, 2021
  • 408 Views
ಆರ್ಥಿಕವಾಗಿ ಸದೃಢರಾಗಲು ನರೇಗಾ  ಯೋಜನೆ ಸಹಕಾರಿ

ಕನಕಗಿರಿ : ತಾಲೂಕಿನ ಕರಡೋಣ ಗ್ರಾ.ಪಂ ವ್ಯಾಪ್ತಿಯ ಯತ್ನಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ಚೆಕ್ ಡ್ಯಾಮ್ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ  ರೋಜಗಾರ್ ದಿವಸ್ ಆಚರಣೆ ಮಾಡಲಾಯಿತು.

ತಾ.ಪಂ ಸಹಾಯಕ ನಿರ್ದೇಶಕರಾದ ಮಾನ್ಯ ಚಂದ್ರಶೇಖರ್ ಕಂದಕೂರ ಮಾತನಾಡಿ, ಕೃಷಿಕರು ಎರೆತೊಟ್ಟಿ ನಿರ್ಮಾಣ ಮಾಡಿಕೊಳ್ಳುವಂತೆ ಯೋಜನೆಯಡಿ ಆಗಸ್ಟ್ 15 ರಿಂದ ರೈತ ಬಂಧು ಅಭಿಯಾನ ಶುರುವಾಗಲಿದೆ. ಗ್ರಾ.ಪಂ ಗೆ 30 ಎರೆತೊಟ್ಟಿ ನಿರ್ಮಾಣದ ಗುರಿ ನೀಡಲಾಗಿದ್ದು, ರೈತರು ಉಪಯೋಗ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಡಿ ವರ್ಷದಲ್ಲಿ ನೂರು ದಿನ ದುಡಿಯಲು ಅವಕಾಶವಿದೆ. ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಲು ಯೋಜನೆ ಸಹಕಾರಿಯಾಗಿದೆ. ಫಲಾನುಭವಿಗಳು ಕಟ್ಟಿಸಿಕೊಂಡಿರುವ ವೈಯಕ್ತಿಕ ಶೌಚಗೃಹಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ರಾಮುನಾಯ್ಕ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿವೈಯಕ್ತಿಕ, ಸಮುದಾಯಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು. ಜಾಬ್ ಕಾರ್ಡ್ ಇದ್ದವರೂ ಯೋಜನೆಯ ಸೌಲಭ್ಯ ಪಡೆಯಲು ಮುಂದಾಗಬೇಕು ಎಂದರು.
ಐಇಸಿ ಕೋರ್ಡಿನೇಟರ್ ಬಾಳಪ್ಪ ತಾಳಕೇರಿ, ರೋಜಗಾರ್, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ಮಾರುತಿ, ಬಿಎಫ್ ಟಿ ಮಂಜಮ್ಮ ಬಂಡಿ, ರುದ್ರಪ್ಪ ದಳಪತಿ, ಮಹಾಂತೇಶ, ಮಲ್ಲಿಕಾರ್ಜುನ, ಕಾಯಕಬಂಧುಗಳಾದ ಲಿಂಗಪ್ಪ, ಬಸವರಾಜ, ಗ್ರಾ.ಪಂ ಸಿಬ್ಬಂದಿ ಮಹಾಂತೇಶ ಇನ್ನಿತರರಿದರು.

Related