ನ್ಯಾಕ್ ಮಾನ್ಯತೆಯೇ ಅನುದಾನಕ್ಕೆ ಮಾನದಂಡ

  • In Crime
  • February 25, 2021
  • 406 Views
ನ್ಯಾಕ್ ಮಾನ್ಯತೆಯೇ ಅನುದಾನಕ್ಕೆ ಮಾನದಂಡ

ಬಳ್ಳಾರಿ : ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರಡಿಶನ್ ಕೌನ್ಸಿಲ್‌ನಿಂದ ನ್ಯಾಕ್ ಮಾನ್ಯತೆ ಪಡೆದರಷ್ಟೇ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕಲು ಸಾಧ್ಯ’ ಎಂದು ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು. ಪಿ. ಅಲಗೂರು ಪ್ರತಿಪಾದಿಸಿದರು.

ಕಾಲೇಜುಗಳ ಮಾನ್ಯತೆ ಮತ್ತು ಮೌಲ್ಯಮಾಪನ ಮಾರ್ಗಸೂಚಿ ಕುರಿತು ಕಾರ್ಯಾಗಾರ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಪರಿಷತ್ತಿನ ಪ್ರಕಾರ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತವಾಗಿರುವ ಬಹುತೇಕ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಒಳಪಟ್ಟಿಲ್ಲ. ಹೀಗಾಗಿ ಅನುದಾನವೂ ದೊರಕುವ ಸಾಧ್ಯತೆ ಇಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದ ಒಳಗೆ ನ್ಯಾಕ್ ಮಾನ್ಯತೆಯನ್ನು ಪಡೆಯಲು ಶ್ರಮಿಸಬೇಕು’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ 202020ಯನ್ನು ಅನುಷ್ಠಾನಕ್ಕೆ ತರಬೇಕಾದರೆ ಕಾಲೇಜುಗಳ ಆಂತರಿಕ ಗುಣಮಟ್ಟ ಮೇಲ್ಮಟ್ಟಕ್ಕೇರಬೇಕು. ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ನೀಡಲಾಗುವ ಸೌಲಭ್ಯಗಳನ್ನು ಗಮನಿಸಿಯೇ ಪೋಷಕರು ಮಕ್ಕಳನ್ನು ದಾಖಲಾತಿ ಮಾಡುತ್ತಾರೆ. ಕಾಲೇಜಿನ ತಾಂತ್ರಿಕ ಮತ್ತು ಆಂತರಿಕ ಗುಣಮಟ್ಟವೇ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುತ್ತದೆ. ಅದರೊಂದಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನೂ ಹೆಚ್ಚಿಸುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಕಾಲೇಜುಗಳು ಸಜ್ಜುಗೊಳ್ಳಬೇಕು. ಅದಕ್ಕಾಗಿ ಮಾನ್ಯತೆ ಮತ್ತು ಮೌಲ್ಯಮಾಪನದ ನಿಯಮಗಳಿಗೆ ಅನುಸಾರವಾಗಿಯೇ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಐಕ್ಯುಎಸಿ ನಿರ್ದೇಶಕ ಪ್ರೊ. ರಾಬರ್ಟ ಜೋಸ್, ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ. ಪ್ರೊ. ವೆಂಕಟಯ್ಯ, ವಿತ್ತಾಧಿಕಾರಿ. ಡಾ. ಕೆ.ಸಿ. ಪ್ರಶಾಂತ ಉಪಸ್ಥಿತರಿದ್ದರು.

Related