ನಾಗರ ಪಂಚಮಿಗೆ ಹಾಲೆರೆದ ವನಿತೆಯರು

ನಾಗರ ಪಂಚಮಿಗೆ ಹಾಲೆರೆದ ವನಿತೆಯರು

ಬಾದಾಮಿ ಪಟ್ಟಣದ ಜಯನಗರದಲ್ಲಿರುವ ನಾಗಪ್ಪನ ಮೂರ್ತಿಗೆ ನಾಗರ ಪಂಚಮಿ ನಿಮಿತ್ಯ ಮಹಿಳೆಯರು, ಮಕ್ಕಳು ನಾಗದೇವರಿಗೆ ಹಾಲೆರೆದು ಭಕ್ತಿ ಭಾವವನ್ನು ಮೆರೆದರು. ಪ್ರತಿ ವರ್ಷದಂತೆ ಈ ವರ್ಷವು ಮಹಿಳೆಯರು ಹೊಸ ಬಟ್ಟೆ ಧರಿಸಿ ನಾಗರ ಹುತ್ತಕ್ಕೆ ಹಾಲೆರೆಯುವಾಗ ತಂದೆ ಪಾಲು, ತಾಯಿ ಪಾಲು, ಅಣ್ಣನ ಪಾಲು, ಅಕ್ಕನ ಪಾಲು, ಗಂಡನ ಪಾಲು, ಮನೆ ದೇವರ ಪಾಲು ಎಂದು ಹಾಲೆರೆದು ನಾಗ ದೇವತೆಯು ನಮ್ಮ ಕುಟುಂಬಕ್ಕೆ ಸುಖ ಶಾಂತಿ ಸಂತೋಷ ಆಯುರ್ ಆರೋಗ್ಯ ಸಂಪತ್ತು ನೆಮ್ಮದಿ ಕೊಡು ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ವಿವಿಧ ರೀತಿಯ ಲಡ್ಡು, ಅರಳು, ಹೂವು, ಹಣ್ಣು ಸಮರ್ಪಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

Related