ನಾಗರ ಪಂಚಮಿ : ಬಸವ ನೆಲದಲ್ಲಿ ಹಾವು ಪ್ರತ್ಯಕ್ಷ

ನಾಗರ ಪಂಚಮಿ : ಬಸವ ನೆಲದಲ್ಲಿ ಹಾವು ಪ್ರತ್ಯಕ್ಷ

ಬಸವನಬಾಗೇವಾಡಿ ವಿಶ್ವಗುರು ಬಸವೇಶ್ವರರು ಜನಿಸಿದ ಪಟ್ಟಣದ ಬಸವ ಜನ್ಮ ಸ್ಮಾರಕದ ಹತ್ತಿರದಲ್ಲಿಯೇ ನಾಗರಪಂಚಮಿಯ ದಿನ ಆಭರಣ ಜಾತಿಯ ಮೂರು ಅಡಿ ಉದ್ದನೆಯ ಹಾವು ಪ್ರತ್ಯಕ್ಷವಾಗಿ ಬಸವ ಭಕ್ತರಿಗೆ ಅಚ್ಚರಿಯನ್ನುಂಟು ಮಾಡಿದ ಘಟನೆ ಜರುಗಿತು. ಸ್ಮಾರಕದ ಹತ್ತಿರದ ನಿವಾಸಿಗಳ ಮಹಿಳೆಯರು ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಮಣ್ಣಿನ ನಾಗಪ್ಪನಿಗೆ ಹಾಲೆರೆಯುವ ಸಂಭ್ರಮದಲ್ಲಿದ್ದಾಗ ಮನೆಯ ಮುಂದೆ ಹಾವೊಂದು ಪ್ರತ್ಷಕ್ಷವಾದಾಗ, ಆಗ ಸಂಗನಗೌಡ ರಾಮನಗೌಡ ಎಂಬ ಯುವಕ ಕೂಡಲೇ ಸ್ಥಳಕ್ಕೆ ಆಗಮಿಸಿ ಹಾವನ್ನು ನಿರ್ಭಯವಾಗಿ ಹಿಡಿದರು. ಆಟೋ ಚಾಲಕನಾದ ಸಂಗನಗೌಡ ಕಳೆದ ಮೂರು ವರ್ಷಗಳಿಂದ ಸುಮಾರು ೨೦೦ ರಿಂದ ೩೦೦ ಹಾವುಗಳನ್ನು ಹಿಡಿದಿದ್ದು, ಉರಗ ಸಂತತಿ ಉಳಿಯಬೇಕು, ಯಾರೂ ಹಾವುಗಳನ್ನು ಕೊಲ್ಲಬಾರದು ಎಂಬುದು ಇವರ ಆಶಯ. ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾವು ಕಂಡಲ್ಲಿ ತೆರಳಿ, ಉಚಿತವಾಗಿ ಹಾವು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಉರಗ ಸಂತತಿ ಸಂರಕ್ಷಿಸುವ ಕಾರ್ಯ ಮೆಚ್ಚುವಂತದ್ದು.

Related