ಮುರಳಿ ಕೈ ತುತ್ತು ತಿಂದ ಶಿವಣ್ಣ

ಬೆಂಗಳೂರು, ಮಾ. 14 :  ನಟ ಶ್ರೀಮುರಳಿ ಅವರು ತಮ್ಮ ಮಾವ ಡಾ. ಶಿವರಾಜ್ ಕುಮಾರ್ ಅವರಿಗೆ ಊಟ ತಿನ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈಗಾಗಲೇ ಮಾಲೆ ಧರಿಸಿರುವ ಶಿವಣ್ಣ, ಭಾನುವಾರ ತನ್ನ ಸ್ನೇಹಿತರ ಜೊತೆಗೆ ಶಬರಿಮಲೆ ಯಾತ್ರೆ ತೆರಳಲಿದ್ದಾರೆ. ಹೀಗಾಗಿ ಇಂದು ನಾಗವಾರದ ತಮ್ಮ ನಿವಾಸದಲ್ಲಿ ವಿಶೇಷ ಹೋಮ ಮಾಡಿಸಿದರು. ಈ ಪ್ರಯುಕ್ತ ರಾಜ್ ಕುಟುಂಬವು ಅಲ್ಲಿ ನೆರೆದಿದ್ದರು. ಶಿವಣ್ಣನ ಈ ಸರಳತೆಗೆ ಫ್ಯಾನ್ಸ್ ಸಖತ್ ಫಿದಾ ಆಗಿದ್ದಾರೆ.

ಹಿಂದೆ ಶಿವಣ್ಣನ ಅಭಿಮಾನಿಯೊಬ್ಬರು ಶಿವಣ್ಣನಿಗೆ ಖಾಸಗಿ ಕಾರ್ಯಕ್ರಮವೂಂದರಲ್ಲಿ ದಯಮಾಡಿ ನೀವು ಸಾಯಿ ಬಾಬಾ ಅವರ ಬಗ್ಗೆ ಸಿನಿಮಾ ಮಾಡಿ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸುತ್ತಾ ಶಿವಣ್ಣ, ಹಾಕಿಕೊಂಡ ಚಪ್ಪಲಿ ಬಿಚ್ಚಿ ಸಾಯಿ ಬಾಬಾ ಮೇಲಿನ ಭಕ್ತಿಯನ್ನು ಹೊರಹಾಕಿದ್ದರು. ಶಿವಣ್ಣನ ಈ ದೈವಭಕ್ತಿಗೆ ಅಭಿಮಾನಿಗಳು ಮಾರು ಹೋಗಿದ್ದರು.

View this post on Instagram

🙌😍😘 @nimmashivarajkumar @sriimurali

A post shared by Dr.Shivarajkumar Fc (@dr.shivarajkumar) on

Related