ಒಂದೇ ಪರೀಕ್ಷಾ ಕೇಂದ್ರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ತಾಯಿ-ಮಗ

  • In State
  • March 25, 2024
  • 62 Views
ಒಂದೇ ಪರೀಕ್ಷಾ ಕೇಂದ್ರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ತಾಯಿ-ಮಗ

ಯಾದಗಿರಿ: ರಾಜ್ಯದಾದ್ಯಂತ ಇಂದಿನಿಂದ 10ನೇ ತರಗತಿಯ ಪರೀಕ್ಷೆ ಪ್ರಾರಂಭವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬರೆಯಲು ಸಿದ್ಧತೆಯನ್ನು ಮಾಡಿಕೊಂಡು ಪರೀಕ್ಷೆ ಬರೆಯುತ್ತಿದ್ದಾರೆ.

ಇನ್ನು ಯಾದಗಿರಿ ಜಿಲ್ಲೆಯಲ್ಲಿ 32 ವರ್ಷದ ಮಹಿಳೆಯೊಬ್ಬರು ತನ್ನ ಮಗನ ಜೊತೆ ತಾವು ಕೂಡ 10ನೇ ತರಗತಿ ಪರೀಕ್ಷೆಯನ್ನು ಬರೆಯಲು ಬಂದಿದ್ದಾರೆ. 32 ವರ್ಷದ ತಾಯಿ ತನ್ನ ಮಗನ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ತಾಯಿ-ಮಗ ಪರೀಕ್ಷೆ ಬರೆಯುತ್ತಿರುವ ಅಪರೂಪದ ಪ್ರಸಂಗ ನಡೆದಿದೆ.

ಇದು ನಡೆದಿದ್ದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ತಾಯಿ ಗಂಗಮ್ಮ (32) ಹಾಗೂ ಆಕೆಯ ಮಗನ ಮಲ್ಲಿಕಾರ್ಜುನ ಒಂದೇ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನನ್ನ ಮಗನೊಟ್ಟಿಗೆ ಬರೆಯುತ್ತಿರುವುದು ಸಂತಸ ತಂದಿದೆ ಎಂದು ಗಂಗಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಮಗ ಮಲ್ಲಿಕಾರ್ಜುನ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದು, ಶಹಾಪುರ ತಾಲೂಕಿನ ಸಗರ ಪರೀಕ್ಷಾ ಕೇಂದ್ರದಲ್ಲಿ ತಾಯಿಯೊಡನೆ ಪರೀಕ್ಷೆ ಬರೆಯುತ್ತಿದ್ದಾನೆ.

32 ವರ್ಷದ ಗಂಗಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಮೂಲಕ ಕಲಿಕೆಗೆ ವಯಸ್ಸಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮನಸು ಮಾಡಿದರೆ ಯಾವ ವಯಸ್ಸಿನಲ್ಲಿ ಯಾವ ಪರೀಕ್ಷೆ ನಾದರೂ ಬರೆಯಬಹುದು. ನಮ್ಮ ಅಕ್ಕ ಪಕ್ಕದವರು ಈ ವಯಸ್ಸಿನಲ್ಲಿ ಪರೀಕ್ಷೆ ಬರೆದರೆ ಏನೆಂದುಕೊಳ್ಳುತ್ತಾರೆ ಎಂಬುದನ್ನು ನಾವು ಮನದಲ್ಲಿಟ್ಟುಕೊಳ್ಳದೆ ನಮ್ಮ ಜೀವನಕೋಸ್ಕರ ನಾವು ದಿಟ್ಟ ಹೆಜ್ಜೆಯನ್ನು ಇಡಲೇಬೇಕು ಎಂದು ಪರೀಕ್ಷೆ ಬರೆಯುತ್ತಿರುವ ಗಂಗಮ್ಮ ಅವರು ಹೇಳಿದರು.

Related