ಚಿಕ್ಕ ಮನೆಗೆ 1ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್

ಚಿಕ್ಕ ಮನೆಗೆ 1ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್

ಕೊಪ್ಪಳ: ರಾಜ್ಯದಲ್ಲಿ ಇತ್ತೀಚೆಗೆ ವಿದ್ಯುತ್ ದರ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಕೊಪ್ಪಳ ನಗರದಲ್ಲಿ ಪುಟ್ಟ ಮನೆಯಲ್ಲಿ ವಾಸವಿರುವ ಕೇವಲ ಎರಡು ಕೋಣೆಗಳಿರುವಂತಹ ಮನೆಯಲ್ಲಿ ಒಬ್ಬ ಅಜ್ಜಿ ಇರುವಂತ ಮನೆಗೆ ಸರಿಸುಮಾರು ಒಂದು ಲಕ್ಷಕ್ಕೂ ಮೇಲು ವಿದ್ಯುತ್ತರ ಬಿಲ್‌ ಬಂದಿರುವುದರಿಂದ ಅಜ್ಜಿ ಕಂಗೆಟ್ಟಿದ್ದಾರೆ ಹಾಗೂ ರಾಜ್ಯದ ಜನ ಸಹ ದಂಗ್ ಆಗಿದ್ದಾರೆ.

ಹೌದು, ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧೆಗೆ ಜೆಸ್ಕಾಂ 1 ಲಕ್ಷ ಕ್ಕೂ ಹೆಚ್ಚು ದರದ ವಿದ್ಯುತ್ ಬಿಲ್ ನೀಡಿ ಶಾಕ್‍ನೀಡಿದೆ. ಈ ಎಡವಟ್ಟು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೊಪ್ಪಳದ ಭಾಗ್ಯ ನಗರದಲ್ಲಿ ವಾಸವಾಗಿರುವ ವೃದ್ಧೆ ಗಿರಿಜಮ್ಮ ಅವರು ಮನೆಯಲ್ಲಿ ಕೇವಲ 2 ಲೈಟ್ ಉರಿಸುತ್ತಿದ್ದು, ಇವರಿಗೆ ಮೇ ತಿಂಗಳ ಜೆಸ್ಕಾಂ ನೀಡಿರುವ ಮೊತ್ತ 1,03,315 ರೂ. ಗಳಾಗಿದ್ದು, ಇದನ್ನು ನೋಡಿ ಅವರು ಕಣ್ಣೀರು ಹಾಕಿದ್ದಾರೆ.

ವಿಶೇಷವೆಂದರೆ ಈ ಮನೆಗೆ ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಪ್ರತಿತಿಂಗಳು 70-80 ರೂ. ಬಿಲ್ ಬರುತ್ತಿತ್ತು, ಆದರೆ ಈಗ 1ಲಕ್ಷ ಮೊತ್ತದ ಬಿಲ್ ಬಂದಿದೆ ಎಂದು ಗಾಬರಿಗೊಂಡಿದ್ದಾರೆ. ಸ್ಥಳೀಯರು ಇದು ಎಲ್ಲೂ ಎಡವಟ್ಟು ಆಗಿದೆ ಚಿಂತಿಸಬೇಡಿ ಎಂದು ಹೇಳಿದರೂ ಕೂಡ ಆತಂಕದಲ್ಲೇ ಕಣ್ಣೀರು ಹಾಕಿದ್ದಾರೆ.

ಈ ವಿಷಯ ತಿಳಿದ ತಕ್ಷಣ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆದಾವಿಸಿ ನಿಮಗೆ ಇಷ್ಟೊಂದು ಬಿಲ್ಲು ಬಂದಿರುವುದಿಲ್ಲ, ಇದು  ಮೀಟರ್ ಅಲ್ಲಿ ತೊಂದರೆ ಆಗಿರುವುದರಿಂದ ನಿಮಗೆ ಇಷ್ಟೊಂದು ಬಿಲ್ಲು ಬಂದಿದೆ. ಹಾಗಾಗಿ ನೀವು ಇಷ್ಟೊಂದು ಬಿಲ್ಲು ಕಟ್ಟು ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.

 

Related