ಉದ್ಯಾನವನ ಅಭಿವೃದ್ಧಿ, ಪುಟ್ ಪಾತ್ ನಿರ್ವಹಣೆಗೆ ಹೆಚ್ಚು ಹಣ ಮೀಸಲಿರಲಿ

ಉದ್ಯಾನವನ ಅಭಿವೃದ್ಧಿ, ಪುಟ್ ಪಾತ್ ನಿರ್ವಹಣೆಗೆ ಹೆಚ್ಚು ಹಣ ಮೀಸಲಿರಲಿ

ಹುಬ್ಬಳ್ಳಿ, ಮಾ. 07: ಬಜೆಟ್‌ನಲ್ಲಿ ಉದ್ಯಾನವನ ಅಭಿವೃದ್ಧಿ, ಪುಟಪಾತ್ ನಿರ್ವಹಣೆ, ಹಿರಿಯ ನಾಗರಿಕರಿಗೆ ಹೆಚ್ಚಿನ ಅನುದಾನ, ಉಣಕಲ್ ಕೆರೆ ಅಭಿವೃದ್ಧಿ ( ಕಾರಂಜಿ ನಿರ್ಮಾಣ) ಬಸ್ ತಂಗುದಾಣ ನಿರ್ಮಾಣ, ಶೌಚಾಲಯ ನಿರ್ವಹಣೆ, ಮಹತ್ಮಾ ಗಾಂಧಿ ಪುತ್ಥಳಿ ಸ್ಥಾಪನೆ, ರೈಲ್ವೆ ನಿಲ್ದಾಣ, ಚೆನ್ನಮ್ಮ ವೃತ್ತದಲ್ಲಿ ಅಂಡರ್ ಪಾಸ್, ದಿನಕ್ಕೊಮ್ಮೆ ನೀರು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ವಾಣಿಜ್ಯನಗರದ ಜನರು ಆಯುಕ್ತರಿಗೆ ಮನವಿ ಮಾಡಿದರು.

ಹು-ಧಾ ಮಹಾನಗರ ಪಾಲಿಕೆಯಲ್ಲಿ  ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು 2020-21ನೇ ಸಾಲಿನಲ್ಲಿ ಅಳವಡಿಸಿಕೊಳ್ಳಬಹುದಾದ ಹಲವು ಸಲಹೆಗಳನ್ನು ನೀಡಿದರು.

ಉದ್ಯಾನವನದಲ್ಲಿ ಹಿರಿಯರಿಗೆ ವಿಶ್ರಾಂತಿ ಕೊಠಡಿ

ಅವಳಿನಗರದಲ್ಲಿರುವ ಉದ್ಯಾನವನಗಳನ್ನು ನವೀಕರಣಗೊಳಿಸಬೇಕಿದೆ. ಎಲ್ಲ ಉದ್ಯಾನವನಗಳಲ್ಲಿ ವಾಕಿಂಗ್ ಪಾಥ್ ನಿರ್ಮಿಸಬೇಕು. ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಿಸಿ ಅದರಲ್ಲಿ ಕುಡಿಯಲು ನೀರು ಹಾಗೂ ಓದಲು ಪತ್ರಿಕೆ ಒದಗಿಸುವ ಕಾರ್ಯವಾಗಬೇಕು. ಆ ಕೊಠಡಿ ನಿರ್ವಹಣೆಯನ್ನು ಸ್ಥಳೀಯ ಹಿರಿಯ ನಾಗರಿಕರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಸಂಘದ ಬಿ.ಎ.ಪಾಟೀಲ ಸಲಹೆ ನೀಡಿದರು.

ಗಣೇಶ ವಿಸರ್ಜನೆ ಬಾವಿ ನವೀಕರಣ

ವಾಣಿಜ್ಯ ನಗರದಲ್ಲಿ 720ಕ್ಕೂ ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಾವಿ ನವೀಕರಣ ಅಗತ್ಯವಿದ್ದು, ಅಲ್ಲೊಂದು ವೇದಿಕೆ ನಿರ್ಮಿಸಬೇಕಿದೆ. ಚನ್ನಮ್ಮ ವೃತ್ತ ಹಾಗೂ ಮಹಾತ್ಮ ಗಾಂಧಿ ಉದ್ಯಾನವನ್ನು ಖಾಸಗಿಯವರಿಗೆ ನೀಡಿ ಅಭಿವೃದ್ಧಿಗೊಳಿಸಿ ಎಂದು ಅಮರೇಶ ಹಿಪ್ಪರಗಿ ತಿಳಿಸಿದರು.

ಮಹತ್ಮಾ ಗಾಂಧಿ ಪುತ್ಥಳಿ ಸ್ಥಾಪಿಸಿ

ಮಹತ್ಮಾ ಗಾಂಧಿ ಉದ್ಯಾನವದಲ್ಲಿ ಮಹತ್ಮಾ ಗಾಂಧಿ ಪುತ್ಥಳಿ ಇಲ್ಲದಂತಾಗಿದೆ. ಕನಿಷ್ಠ 7 ಅಡಿಯ ಮಹತ್ಮಾ ಗಾಂಧಿ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿ. ಉದ್ಯಾವನದಲ್ಲಿರುವ ಮಹಾತ್ಮರ ಪುತ್ಥಳಿ ಕೆಳಗೆ ಚರಿತ್ರೆ ತಿಳಿಸುವ ಕೆಲಸವಾಗಲಿ.

ಹೊಸೂರಿನಲ್ಲಿರುವ ಪಾಲಿಕೆ ಕಟ್ಟಡ ಕೆಡವಿ ಹೊಸದೊಂದು ಮಾರ್ಕೆಟ್ ನಿರ್ಮಿಸುವ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಅಲ್ಲಿ ಹೊಸ ಮಾರ್ಕೆಟ್ ಕಟ್ಟಡ ನಿರ್ಮಿಸಬೇಕು. ಹೊಸೂರು ಕ್ರಾಸ್, ರಾಣಿ ಚೆನ್ನಮ್ಮ ಸರ್ಕಲ್, ಸ್ಟೇಶನ್ ರಸ್ತೆ ದಾಟಲು ವಯೋವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಬಜೆಟ್‌ನಲ್ಲಿ 3 ಕಡೆ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಪಿ.ಎಸ್.ಧರಣೆಪ್ಪನವರ ತಿಳಿಸಿದರು.

ಮಹಾನಗರ ಪಾಲಿಕೆ ಬಾಡಿಗೆ ನೀಡಿರುವ ಕಟ್ಟಡಗಳಲ್ಲಿ ಸೌಲಭ್ಯ ಒದಗಿಸಿ. ಒಂದು ಕಟ್ಟಡಕ್ಕೆ ಒಂದು ಶೌಚಾಲಯದ ಸೌಲಭ್ಯ ಒದಗಿಸಿ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಾಲೋನಿಯಲ್ಲಿ ಸಂಜೆ ಶಾಲೆ ಪ್ರಾರಂಭಿಸಿ ಎಂದು ಪ್ರೇಮನಾಥ ಚಿಕ್ಕತುಂಬಳ ಹೇಳಿದರು.

ಇನ್ನೂ ಉಣಕಲ್ ಕೆರೆ ಅಭಿವೃದ್ಧಿ, ಪುಟಪಾತ್ , ಸ್ವಚ್ಛತೆ, ದಿನಕ್ಕೊಮ್ಮೆ ಕುಡಿಯುವ ನೀರು, ಸ್ಕೇಟಿಂಗ್ ಟ್ರಾ÷್ಯಕ್, ಪೌರ ಕಾರ್ಮಿಕರ ಕೊರತೆ ನಿವಾರಣೆ ಸೇರಿದಂತೆ ಹಲವು ಹೊಸ ಯೋಜನೆಗಳ ಜೊತೆಗೆ ಅಪೂರ್ಣಗೊಂಡಿರುವ ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಸಾರ್ವಜನಿಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಮುಖ್ಯ ಲೆಕ್ಕಾಕಾರಿ ಶಂಕರನಾAದ ಬನಶಂಕರಿ ಸೇರಿದಂತೆ ಮತ್ತಿತರರು ಇದ್ದರು.

 

Related