ಬಾಳೆಹಣ್ಣಿಗಾಗಿ ಕೋತಿಗಳ ಕಚ್ಚಾಟ..!

  • In Video
  • March 14, 2020
  • 397 Views

ಮಾ. 14 : ಕರೋನಾ ವೈರಸ್ ಭೀತಿಯಿಂದ ಜಗತ್ತಿನಾದ್ಯಂತ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಭಾರೀ ಸಂಖ್ಯೆಯಲ್ಲಿ ತನ್ನಲ್ಲಿಗೆ ಬರುತ್ತಿದ್ದ ಪ್ರವಾಸಿಗರನ್ನು ನೆಚ್ಚಿಕೊಂಡಿದ್ದ ದೇಶಗಳಲ್ಲಿ ಒಂದಾದ ಥಾಯ್ಲೆಂಡ್ ಆರ್ಥಿಕತೆಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ.
ಥಾಯ್ಲೆಂಡ್ನ ಲಾಪ್ಬರಿಯಲ್ಲಿರುವ ಕೋತಿಗಳಿಗೆ ಪ್ರವಾಸಿಗರು ಬರುತ್ತಿದ್ದ ವೇಳೆ ಭರ್ಜರಿಯಾಗಿ ತಿನ್ನಲು ಸಿಗುತ್ತಿತ್ತು.
ಆದರೆ ಇತ್ತೀಚೆಗೆ ಪ್ರವಾಸೋದ್ಯಮ ಚಟುವಟಿಕೆಗಳು ಮಂಕಾಗಿರುವ ಕಾರಣ ಈ ಕೋತಿಗಳು ಆಹಾರಕ್ಕಾಗಿ ಪರದಾಡುತ್ತಿವೆ.
ಒಂದೇ ಒಂದು ತುಂಡು ಬಾಳೆಹಣ್ಣಿಗಾಗಿ ಕೋತಿಗಳ ಗ್ಯಾಂಗ್ ಯಾವ ಮಟ್ಟಿಗೆ ಕಿತ್ತಾಡುತ್ತಿವೆ ಎಂಬ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಹಾರಕ್ಕಾಗಿ ನೂರಾರು ಕೋತಿಗಳು ಪರದಾಡುತ್ತಿರುವ ವಿಡಿಯೋಗಳು ಸಹ ಇದೇ ವೇಳೆ ವೈರಲ್ ಆಗಿವೆ.

Posted by Sasaluk Rattanachai on Tuesday, March 10, 2020

Related