ಸದನದಲ್ಲಿ ಬೆಂಗಳೂರು ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ ಶಾಸಕ ಸತೀಶ್ ರೆಡ್ಡಿ

ಸದನದಲ್ಲಿ ಬೆಂಗಳೂರು ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ ಶಾಸಕ ಸತೀಶ್ ರೆಡ್ಡಿ

ಬೆಳಗಾವಿ: ಬೆಳಗಾವಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ ಸತೀಶ್ ರೆಡ್ಡಿ ಅವರು ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಲು ಸುಮಾರು ಒಂದರಿಂದ ಒಂದುವರೆ ಗಂಟೆ ಬೇಕಾಗುತ್ತದೆ. ಮಳೆ ಬಂದಮೇಲೆ ನಗರದಲ್ಲಿ ರಸ್ತೆಗಳೆಲ್ಲ ಗುಂಡಿ ಗುಂಡಾಂತರಗಳಾಗುತ್ತವೆ.

ನಗರದ ಇಂಥ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಕೇಳಿದರೆ ಅವರು ನೀಡುವ ಉತ್ತರವೇನೆಂದರೆ, ಹಿಂದಿನ ನಿಮ್ಮ ಬಿಜೆಪಿಯ ಸರ್ಕಾರ ಇದ್ದಾಗ ನೀವೆಲ್ಲ ಯಾವೆಲ್ಲ ಕೆಲಸ ಮಾಡಿದ್ದೀರಿ ತೋರಿಸಿ ಎಂದು ತೋರಿಕೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಸದನದಲ್ಲಿ ಸತೀಶ್ ರೆಡ್ಡಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಬೆಂಗಳೂರು ನಗರದಲ್ಲಿ ಮಳೆ ಬಂದಾಗೆಲ್ಲ ರಸ್ತೆ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವುದು, ಯಾವುದೇ ಸರ್ಕಾರ ಇದ್ದರೂ ಈ ತೊಂದರೆ ಅನುಭವಿಸುವುದು ಸಾರ್ವಜನಿಕರು ಮಾತ್ರ. ಹಾಗಾಗಿ ಆಡಳಿತದಲ್ಲಿರುವ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ ನಗರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೇಳಿದರು.

 

 

 

Related