ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ ಸಚಿವರು

ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ ಸಚಿವರು

ರಾಮನಗರ : ಬಿಡದಿಯಲ್ಲಿರುವ ಟೊಯೋಟಾ ಕಾರು ತಯಾರಿಕಾ ಘಟಕದ ಕಾರ್ಮಿಕರು 86 ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಕಾರ್ಮಿಕ ಮತ್ತು ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟಿನ ಕುರಿತು ಸದನದಲ್ಲಿ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ವಿವಾದವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಖುದ್ದಾಗಿ ನಾನು ಟೊಯೋಟಾ ಕಾರ್ಖಾನೆಗೆ ಭೇಟಿ ನೀಡಿ ವಿವಾದ ಇತ್ಯರ್ಥ ಮಾಡಲು ಪ್ರಯತ್ನ ನಡೆಸಿದ್ದೆ. ವಿಧಾನ ಸೌಧದಲ್ಲಿ ಸಭೆ ನಡೆಸಿದಾಗ ಕಾರ್ಮಿಕ ಮುಖಂಡರು ದೂರವುಳಿದರು ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

3,415 ಕಾರ್ಮಿಕರ ಪೈಕಿ 1896 ಮಂದಿ ಈಗಾಗಲೇ ಕೆಲಸಕ್ಕೆ ಹಾಜರಾಗಿದ್ದಾರೆ. ವಿವಾದವನ್ನು ಇತ್ಯರ್ಥಪಡಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಕಾರ್ಮಿಕರ ಸಚಿವರು ಭರವಸೆ ಕೊಟ್ಟರು.

Related