ಬರಪೀಡಿತ ತಾಲೂಕುಗಳಿಗೆ ಸಚಿವರ ಬೇಟಿ

ಬರಪೀಡಿತ ತಾಲೂಕುಗಳಿಗೆ  ಸಚಿವರ ಬೇಟಿ

ಬಳ್ಳಾರಿ,ನ.10: ಜಿಲ್ಲೆಯ ಐದು ತಾಲೂಕುಗಳನ್ನ ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಂದಾಯ.ಕೃಷಿ.ತೋಟಗಾರಿಕೆ. ಜಿಲ್ಲಾಪಂಚಾಯತ್ ಇಲಾಖೆ ಅಧಿಕಾರಿಗಳು
ಸಿರುಗುಪ್ಪ ತಾಲ್ಲೂಕಿನ ರಾರಾವಿ, ಅಗಸನೂರು, ಮಿಟ್ಟೆ ಸೂಗೂರು, ಬೊಮ್ಮಲಾಪುರ
ಕೊತ್ತಲಚಿಂತ, ಕುಡುದರಾಳು ಗ್ರಾಮಗಳ ರೈತರ ಜಮೀನಿಗೆ ಬೆಟಿ ನೀಡಿ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿದರು ಈ ಸಂದರ್ಭದಲ್ಲಿಹತ್ತಿ.ಮೆಣಸಿನಕಾಯಿ ಹಾಗೂ ತೊಗರಿ ಬೆಳೆ ಇಳುವರಿ ಬಾರದೆ ಬೆಳೆ ನಷ್ಟವಾಗಿರುವುದನ್ನ ರೈತರು ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರು.ಬೆಳೆ ಸಮೀಕ್ಷೆಯ ತರುವಾಯ ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಾ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರು ನಾಡಿನ ಬರದಿಂದ ತೊಂದರೆಗೊಳಗಾದ ರೈತರ ಪರವಾಗಿ ನಿಲ್ಲುತ್ತಾರೆ ಸರ್ಕಾರ ರೈತರೊಟ್ಟಿಗಿದೆ ಅನ್ನೊದನ್ನ ರೈತರಿಗೆ ಮನವರಿಕೆ ಮಾಡುವ ಕಾರ್ಯದ ಜೊತೆಗೆ ಅಧಿಕಾರಿಗಳು ಚುರುಕಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮಾಹಿತಿ ನೀಡಬೆಕೆನ್ನುವ ನಿಟ್ಟಿನಲ್ಲಿ ಎಲ್ಲರನ್ನೊಳಗೊಂಡಂತೆ ಬರ ಸಮೀಕ್ಷೆ ಕಾರ್ಯವನ್ನ ನಡೆಸಲಾಗುತ್ತಿದೆ ಎಂದರು.

Related