ಸೇನಾ ಮುಖ್ಯಸ್ಥರ ಸಭೆ

ಸೇನಾ ಮುಖ್ಯಸ್ಥರ ಸಭೆ

ಇಸ್ಲಾಮಾಬಾದ್: ಚೀನಾ-ಭಾರತ ನಡುವೆ ಲಡಾಖ್ ಗಡಿ ಸಂಘರ್ಷ ತೀವ್ರಗೊಂಡಿರುವ ಬೆನ್ನಿಗೆ ಪಾಕಿಸ್ತಾನ ಸೇನೆಯ ಚಟುವಟಿಕೆಯೂ ತೀವ್ರಗೊಂಡಿದೆ. ಪಾಕ್ ಸೇನೆಯೂ ವಿವಿಧ ಚಟುವಟಿಕೆಗಳಲ್ಲಿ ನಿರತವಾಗಿದ್ದು ಅಚ್ಚರಿ ಎಂಬAತೆ ಐಎಸ್‌ಐ ಕೇಂದ್ರ ಕಚೇರಿಯಲ್ಲಿ ಪಾಕ್ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಜನರಲ್ ಬೆಜ್ವಾ ಜತೆಗೆ ಹಾಜರಿದ್ದರು.

ಸೇನಾ ಮುಖ್ಯಸ್ಥ ಜನರಲ್ ಬೆಜ್ವಾ ಐಎಸ್‌ಐ ಕೇಂದ್ರ ಕಚೇರಿಗೆ ಸಾಮಾನ್ಯವಾಗಿ ಈ ರೀತಿ ಹೋಗುವುದಿಲ್ಲ. ಅವರ ಜತೆಗೆ ಲಷ್ಕರ್ ನಾಯಕರು ಕೂಡ ಇದ್ದರು. ಈ ರೀತಿ ಹೋಗಿದ್ದಾರೆ ಎಂದರೆ ಏನೋ ಮಹತ್ವದ ಕಾರ್ಯಾಚರಣೆ ಇದೆ ಎಂದೇ ಅರ್ಥ ಎಂದು ಮೂಲಗಳನ್ನು ಉಲ್ಲೇಖಿಸಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ರೇಡಿಯೋ ಪಾಕಿಸ್ತಾನ್ ವರದಿ ಪ್ರಕಾರ, ಐಎಸ್‌ಐ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನರಲ್ ಬೆಜ್ವಾ ಹೊರತಾಗಿ, ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ನದೀಮ್ ರಾಜಾ, ನೇವಿ ಚೀಫ್ ಅಡ್ಮಿರಲ್ ಝಫರ್ ಮಹ್‌ಮೂದ್ ಅಬ್ಬಾಸಿ, ಏರ್‌ಫೋರ್ಸ್ ಚೀರ್ಫ ಮುಜಾಹಿದ್ ಅನ್ವರ್ ಖಾನ್ ಇದ್ದರು. ಅವರನ್ನು ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಬರಮಾಡಿಕೊಂಡು ಸುದೀರ್ಘ ಮಾತುಕತೆ ನಡೆಸಿದರು.

ನ್ಯೂಯಾರ್ಕ್ ಟೈಮ್ಸ್ನ ಪಾಕ್ ಬ್ಯೂರೋ ಮುಖ್ಯಸ್ಥ ಸಲ್ಮಾನ್ ಮಸೂದ್ ಫೌಜ್ ಹೇಳುವ ಪ್ರಕಾರ, ಸೇನಾ ಮುಖ್ಯಸ್ಥ ಐಎಸ್‌ಐ ಕೇಂದ್ರ ಕಚೇರಿಗೆ ಬರುತ್ತಾರೆ ಎಂಬುದು ಸಾಮಾನ್ಯ ಸುದ್ದಿಯಲ್ಲ. ಇದು ಅಸಹಜವಾಗಿದ್ದು, ಈ ರೀತಿ ಹಿಂದೆAದೂ ಆಗಿರಲಿಲ್ಲ. ಬಾಲಾಕೋಟ್ ಬಿಕ್ಕಟ್ಟು ಏರ್ಪಟ್ಟ ಬಳಿಕ ಭಾರತ-ಪಾಕ್ ನಡುವೆ ಉದ್ವಿಗ್ನತೆ ಇತ್ತು. ಆಗಲೂ ಈ ರೀತಿ ಇವರ್ಯಾರೂ ಐಎಸ್‌ಐ ಕೇಂದ್ರ ಕಚೇರಿಗೆ ಹೋಗಿರಲಿಲ್ಲ. ಮಂಗಳವಾರದ ಸಭೆ ಅಚ್ಚರಿ ಹುಟ್ಟಿಸುವಂಥದ್ದು.

Related