ತಂಬಾಕು ನಿಷೇಧ ಅಂಗಡಿಗಳಿಗೆ ಕಿಕ್ ಕೊಟ್ಟ ವೈದ್ಯಾಧಿಕಾರಿಗಳು

ತಂಬಾಕು ನಿಷೇಧ ಅಂಗಡಿಗಳಿಗೆ ಕಿಕ್ ಕೊಟ್ಟ ವೈದ್ಯಾಧಿಕಾರಿಗಳು

ತುಮಕೂರು: ಇತ್ತೀಚಿನ ದಿನಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಸಿಗರೇಟ್ ಮತ್ತು ತಂಬಾಕು ತಿನ್ನುವುದನ್ನು ತಡೆಗಟ್ಟಬೇಕೆಂದು ತುಮಕೂರು ಜಿಲ್ಲೆಯ ವೈದ್ಯಾಧಿಕಾರಿಗಳು ಸಿಗರೇಟ್ ಝೋನ್ ಟೀ ಅಂಗಡಿಗಳಿಗೆ ಬೆಳಗ್ಗೆ ಬೆಳಗ್ಗೆಯೇ ಕಿಕ್ ಕೊಟ್ಟಿದ್ದಾರೆ.

ಇನ್ನು ಸಿಗರೇಟ್ ಮಾರುವ ಟೀ ಅಂಗಡಿಗಳ ಮೇಲೆ ವೈದ್ಯಾಧಿಕಾರಿಗಳಿಂದ ದಾಳಿ ನಡೆದಿದೆ. ತುಮಕೂರು ಜಿಲ್ಲೆ, ಗುಬ್ಬಿ ಪಟ್ಟಣದಲ್ಲಿನ ಟೀ ಅಂಗಡಿಗಳ ಮೇಲೆ ಈ ದಾಳಿ ನಡೆದಿದೆ. ನಿಯಮ ಮೀರಿ ಸಿಗರೇಟ್ ಮಾರುತ್ತಿದ್ದ ಕೆಲ ಟೀ ಅಂಗಡಿಗಳು, ಹೋಟೆಲ್ ಗಳು ಮತ್ತು ಗೂಡಂಗಡಿಗಳ ಮಾಲಿಕರಿಗೆ ವೈದ್ಯಾಧಿಕಾರಿಗಳು ದಂಡ ವಿಧಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ವೈದ್ಯಾಧಿಕಾರಿಗೆ ಪೊಲೀಸರು ಸಾಥ್ ನೀಡಿದ್ದರು.

Related