ರಗಡ್ ಲುಕ್ಕಿನಲ್ಲಿ ಮಯೂರಿ

ರಗಡ್ ಲುಕ್ಕಿನಲ್ಲಿ ಮಯೂರಿ

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾದ ನಟಿ ಮಯೂರಿ ಈಗ ಮತ್ತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ.  ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮುದ್ದು ಮುದ್ದಾದ ಫೋಟೋ ಹಾಕುತ್ತಿರುವುದರಿಂದ ಪಡ್ಡೆ ಹುಡುಗರ ಮನಕದಿಯುತ್ತಿದ್ದಾರೆ.

ಹೌದು, ನಟಿ ಮಯೂರಿ ಅವರು ತಮ್ಮ ನಟನೆ ಮತ್ತು ನಗುಮುಖದಿಂದಲೇ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ನಟಿ ಮಯೂರಿ ಸೀರಿಯಲ್ ಬಳಿಕ ಸಿನಿಮಾರಂಗಕ್ಕೆ ಮುಖ ಮಾಡಿ ಕೃಷ್ಣ ಲೀಲಾ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ಕನ್ನಡದಲ್ಲಿ ಇವರು ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2 ಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಮಯೂರಿ, ಫೋಟೋ ಗಳನ್ನು ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ತಮ್ಮ ಪ್ರವಾಸದ ಫೋಟೋಗಳು, ಸ್ನೇಹಿತರ ಜೊತೆಗಿನ ಫೋಟೋಗಳು, ವಿವಿಧ ಕಾರ್ಯಕ್ರಮಗಳ, ಮಾಡೆಲಿಂಗ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

 

Related