ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ

ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ

ಕಲಬುರಗಿ : ಈ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲುತೂರಾಟ, ಸಾರಿಗೆ ನೌಕರರ ಮುಷ್ಕರ ಭುಗಿಲೆದ್ದ ಬೆನ್ನಲ್ಲೇ ಬಸ್ ಸಂಚಾರಗಳಿಲ್ಲದೇ ಪರದಾಡುತ್ತಿರುವ ಸಾರ್ವಜನಿಕರ ಆಕ್ರೋಶ ಕೂಡ ತೀವ್ರಗೊಂಡಿದೆ.

ಬೆಂಗಳೂರಿನಲ್ಲಿ  ಬಿಎಂಟಿಸಿ  ಕೆಎಸ್‌ಆರ್‌ಟಿಸಿ  ಬಸ್  ಸಂಚಾರ  ಸಂಪೂರ್ಣ ಸ್ತಬ್ಧಗೊಂಡಿದ್ದು, ಕೆಲ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವಿರಳವಾಗಿ ಓಡಾಡುತ್ತಿವೆ. ಈ ನಡುವೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಾಟ ನಡೆಸಿರುವ ಘಟನೆ ಕಲಬುರಗಿ ಕೋರ್ಟ್ ಬಳಿ ನಡೆದಿದೆ.

Related