ಮಲೇಷಿಯಾ ಉಪಸಚಿವರ ನಿಯೋಗ ರಾಜ್ಯಕ್ಕೆ ಬೇಟಿ

ಮಲೇಷಿಯಾ ಉಪಸಚಿವರ ನಿಯೋಗ ರಾಜ್ಯಕ್ಕೆ ಬೇಟಿ

ಬೆಂಗಳೂರು, ಸೆ.20: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ  ಇಂದು ಬೆಳಗ್ಗೆ ಮಲೇಷ್ಯಾ ಉಪ ಸಚಿವರಾದ ವೈ.ಬಿ.ಸನತೇರ್ ಪುವನ್ ಹಜಾಯ್ ಪುಜಿಯಾ ಬಿನಿಟಿ ಸಲೇಹ್, ರವರನ್ನು ಇಂದು ಕುಮಾರಕೃಪ ಅತಿಥಿ ಗೃಹದಲ್ಲಿ ಇಂದು ಬೇಟಿ ಮಾಡಿದರು.

ರಾಜ್ಯದ ಆಹಾರ ಇಲಾಖೆಯಲ್ಲಿ ಯಾವರೀತಿಯಾದ ವ್ಯವಸ್ಥೆಗಳಿಂದ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ತಲುಪಿಸಿತ್ತೀರಾ ಮತ್ತು ಕಾರ್ಡ್ಗಳನ್ನು ಯಾವ ಮಾದರಿಯಾಗಿ ಜನರಿಗೆ ನೀಡತ್ತೀರಾ ಎಂಬ ಮಾಹಿತಿಗಳನ್ನು ಮಲೇಷಿಯಾ ಸರ್ಕಾರದ ನಿಯೋಗ ಇಂದು ರಾಜ್ಯಕ್ಕೆ ಬೇಟಿ ನೀಡಿ ಮಾನ್ಯ ಸಚಿವರಿಂದ ಮಾಹಿತಿನ್ನು ಪಡೆದರು
ಉಪ ಸಚಿವರ ನಿಯೋಗ ಇನ್ನೂ ಎರಡು ದಿನಗಳು ಬೆಂಗಳೂರಿನಲ್ಲಿಯೇ ಉಳಿಯಲಿದ್ದು, ಅಕ್ಕಿಯ ದಾಸ್ತಾನು ಗೌಡನ್ನುಗಳಿಗೆ ಬೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ ಅವರ ದೇಶದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸುಲು ನಿರ್ದರಿಸಿದ್ದಾರೆ.
ಬೇಟಿಯ ಸಂದರ್ಭದಲ್ಲಿ ಸರ್ಕಾರದ ಆಹಾರ ಇಲಾಖೆಯ ಕಾರ್ಯದರ್ಶಿ ಗಳಾದ ಜಿಸಿ.ಪ್ರಕಾಶ್,ಆಯುಕ್ತರಾದ ಕನಗವಲ್ಲಿ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Related