ಮಲಪ್ರಭಾ, ನದಿ ಅಬ್ಬರ ಇಳಿಮುಖ

ಮಲಪ್ರಭಾ, ನದಿ ಅಬ್ಬರ ಇಳಿಮುಖ

ಬೆಳಗಾವಿ : ಜಿಲ್ಲೆಯ ಕೃಷ್ಣಾ ಹೊರತುಪಡಿಸಿದರೆ ಇನ್ನುಳಿದ ಎಲ್ಲ ನದಿಗಳ ಅಬ್ಬರ ಇಳಿಮುಖವಾಗಿದೆ. ನೆರೆಯ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೃಷ್ಣಾ ನದಿಯ ಒಳಹರಿವು ಹೆಚ್ಚಳವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.95 ಲಕ್ಷ ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 33 ಸಾವಿರ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾಗೆ ಸೇರಿಕೊಳ್ಳುತ್ತಿದೆ. 2.29 ಲಕ್ಷ ಕ್ಯುಸೆಕ್ ಒಳಹರಿವು ಇದೆ. ಹಿಂದಿನ ದಿನ 2.21 ಲಕ್ಷ ಕ್ಯುಸೆಕ್ ಇತ್ತು.

ಘಟಪ್ರಭಾ ನದಿಯ ಒಳಹರಿವು 31,627 ಕ್ಯುಸೆಕ್‌ಗೆ ಇಳಿದಿದೆ. ಇದರಂತೆ ಹಿಡಕಲ್ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವೂ 35,888 ಕ್ಯುಸೆಕ್‌ಗೆ ಇಳಿದಿದೆ. ಗೋಕಾಕ ನಗರದೊಳಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟು ಮಾಡಿರುವ ಘಟಪ್ರಭಾ ಇಳಿಮುಖವಾಗಿದೆ.

Related