ಎಂ.ಬಿ.ಬಿ.ಎಸ್ ವೈದ್ಯರನ್ನು ಕಾಯಂಗೊಳಿಸಿ

ಎಂ.ಬಿ.ಬಿ.ಎಸ್ ವೈದ್ಯರನ್ನು ಕಾಯಂಗೊಳಿಸಿ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಗುತ್ತಿಗೆ ಆಧಾರದ ಮೇಲೆ ಎಂ.ಬಿ.ಬಿ.ಎಸ್ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಸರಕಾರ ಅವರನ್ನು ಕಾಯಂಗೊಳಿಸಬೇಕು ಎಂದು ಗುತ್ತಿಗೆ ವೈದ್ಯ ಡಾ. ಸಂಗಮೇಶ ದಶವಂತ ಜಿ. ಪಂ.ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

ಸಲ್ಲಿಸಿರುವ ಮನವಿಯಲ್ಲಿ 506 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 506 ಎಂ.ಬಿ.ಬಿ.ಎಸ್. ವೈದ್ಯರು ಗುತ್ತಿಗೆ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ 264 ವೈದ್ಯರು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆಯಲ್ಲಿದ್ದಾರೆ. ಪ್ರವಾಹ ಬರಗಾಲ, ಕೋವಿಡ್-19 ಸಮಯದಲ್ಲೂ ಹಿಂಜರಿಯದೇ  ಕಾಯಂ ವೈದ್ಯರು ನಿರ್ವಹಿಸುವ ಎಲ್ಲ ಸೇವೆಯನ್ನು ಮಾಡುತ್ತಿರುವ ಗುತ್ತಿಗೆ ವೈದ್ಯರನ್ನು ಸರಕಾರ ಕಾಯಂಗೊಳಿಸಿ ಅವರಿಗೂ ಸೇವಾ ಭದ್ರತೆ ಕಲ್ಪಿಸಬೇಕು ಎಂದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾರನ್ನೂ ಕಾಯಂಗೊಳಿಸಿರುವುದಿಲ್ಲ. ಹಿಂದಿನಿAದಲೂ ಮೂರು ವರ್ಷ ಗುತ್ತಿಗೆ ಆಧಾರಿತವಾಗಿ ಗ್ರಾಮೀಣ ಸೇವೆ ಪೂರೈಸಿರುವುದನ್ನು ಕಾಯಂಗೊಳಿಸುತ್ತಾ ಬಂದಿರುವುದು. ಒಂದು ವೇಳೆ ಕಾಯಂ ಮಾಡದಿದ್ದರೆ ಗುತ್ತಿಗೆ ಆಧಾರಿತ ಸೇವೆಗೆ ಬರಲು ಎಂ.ಬಿ.ಬಿ.ಎಸ್  ವೈದ್ಯರು ಹಿಂದೇಟು ಹಾಕಿದರೂ ಅಚ್ಚರೆಪಡಬೇಕಾಗಿಲ್ಲ. ಕೂಡಲೇ ಸರಕಾರ ಈ ವಿಷಯದ ಕುರಿತು ತುರ್ತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು

Related