ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿರುವ ಮತ್ತೊಂದು ಬೃಹತ್ ಹಗರಣ ಬಯಲು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿರುವ ಮತ್ತೊಂದು ಬೃಹತ್ ಹಗರಣ ಬಯಲು

ಬೆಂಗಳೂರು: ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್ 160 (ರಾಜರಾಜೇಶ್ವರಿನಗರ ವಾರ್ಡ್) ರ ವ್ಯಾಪ್ತಿಯ ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು 808 ನಕಲಿ ಖಾತೆಗಳನ್ನು ಸೃಷ್ಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಂಚಿಸಿರುವ ಬೃಹತ್ ಹಗರಣ ನಡೆದಿರುತ್ತದೆ.

• 808 ಸ್ವತ್ತುಗಳಿಗೆ ನಕಲಿ `ಎ’ ಖಾತಾಗಳನ್ನು ಮಾಡಿರುವ ಬೃಹತ್ ಹಗರಣ.

• ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ನಡೆದಿರುವ ಹಗರಣ

• ಒಂದೇ ವಾರ್ಡ್ ವ್ಯಾಪ್ತಿಯಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ನಕಲಿ ಖಾತಾಗಳನ್ನು ಮಾಡಿರುವ ಹಗರಣ

• ವಾರ್ಡ್ ನಂಬರ್ 160 ರ ವ್ಯಾಪ್ತಿಯ ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಭಾಗದಲ್ಲಿ ನಡೆದಿರುವ ಹಗರಣ.

ನಕಲಿ ಭೂ ಪರಿವರ್ತನಾ ಆದೇಶ ಪತ್ರಗಳನ್ನು ಲಗತ್ತಿಸಿ `ಎ’ ಖಾತಾಗಳನ್ನು ಮಾಡಿರುವ ಹಗರಣ.

ಸುಮಾರು ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಪಾಲಿಕೆಗೆ ನಷ್ಟ ಉಂಟು ಮಾಡಿರುವ ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯ ಅಧಿಕಾರಿಗಳು

ಸದರಿ ಕಛೇರಿಯಲ್ಲಿ ಮಿತಿ ಮೀರಿರುವ ಮಧ್ಯವರ್ತಿಗಳ ಹಾವಳಿ .ಮಧ್ಯವರ್ತಿ (Broker) ಗಳಾದ ಯಶವಂತ್ ಕುಮಾರ್, ವಿಜಯ್ ಕುಮಾರ್, ಮುತ್ತುರಾಜ್ ಇಂತಹವರು ಪಾಲಿಕೆಯ ಅಧಿಕಾರಿಗಳ ಆಸನಗಳಲ್ಲಿ ಕುಳಿತು ಪಾಲಿಕೆಯ ಕಡತಗಳನ್ನು ಪರಿಶೀಲಿಸುವ ಮತ್ತು ತಿದ್ದುವ ಕೆಲಸಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

02 ವರ್ಷಗಳ ಹಿಂದೆಯೇ ಸಿದ್ದನಾಯಕ್ ಎಂಬ ಕಂದಾಯ ವಸೂಲಿಗಾರ ಈಗಲೂ ಪ್ರತಿನಿತ್ಯ ರಾಜರಾಜೇಶ್ವರಿನಗರ ಉಪ ವಿಭಾಗದ ARO ಕಛೇರಿಯಲ್ಲಿ ಕುಳಿತು ಕಡತಗಳನ್ನು ಪರಿಶೀಲಿಸುವ ಕಾರ್ಯವನ್ನು ಮಾಡುತ್ತಿರುತ್ತಾನೆ.

ARO ಅರುಣ್ ಕುಮಾರ್, RI ಗಣೇಶ್, FDA ಓಂಕಾರಮೂರ್ತಿ, ವಾಟರ್ ಮ್ಯಾನ್ ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಮತ್ತು RR ನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್ ರವರುಗಳು ಶಾಮೀಲು ಇವರುಗಳ ಪೈಕಿ FDA ಓಂಕಾರಮೂರ್ತಿ ಪಾತ್ರವೇ ಎಲ್ಲರಿಗಿಂತಲೂ ಬಹಳ ದೊಡ್ಡದಾಗಿರುತ್ತದೆ. ಈ ಎಲ್ಲಾ ವಂಚಕ ಅಧಿಕಾರಿಗಳು / ನೌಕರರು ಮತ್ತು ಮಧ್ಯವರ್ತಿಗಳ ಕಾನೂನು ಬಾಹಿರ ಕಾರ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್

ಇದೇ 808 ಸ್ವತ್ತುಗಳಿಗೆ ಕಾನೂನು ರೀತ್ಯಾ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳುವ ಅವಕಾಶವಿದ್ದಿದ್ದರೆ ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಪಾಲಿಕೆಗೆ ಸಂದಾಯವಾಗುತ್ತಿತ್ತು.  ಪ್ರಭಾವೀ ಲ್ಯಾಂಡ್ ಡೆವಲಪರ್ ಗಳ ಜೊತೆ ಶಾಮೀಲಾಗಿ ಬೃಹತ್ ಹಗರಣ ನಡೆಸಿರುವ ರಾಜರಾಜೇಶ್ವರಿನಗರ ಉಪ ವಿಭಾಗದ ಅಧಿಕಾರಿಗಳು

ARO ಅರುಣ್ ಕುಮಾರ್, RI ಗಣೇಶ್, FDA ಓಂಕಾರಮೂರ್ತಿ, ವಾಟರ್ ಮ್ಯಾನ್ ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಮತ್ತು RR ನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್ ಇವರುಗಳ ವಿರುದ್ಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳು ದಾಖಲು. ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು, ಮಾನ್ಯ ಆಡಳಿತಾಧಿಕಾರಿಗಳು, ಮಾನ್ಯ ವಿಶೇಷ ಆಯುಕ್ತರು (ಕಂದಾಯ) ಮತ್ತು ರಾಜರಾಜೇಶ್ವರಿನಗರ ವಲಯ ಆಯುಕ್ತರಿಗೆ ದಾಖಲೆಗಳ ಸಹಿತ ದೂರನ್ನು ನೀಡಲಾಗಿದೆ. ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ 122 ಪುಟಗಳ ಸಂಪೂರ್ಣ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ರಮೇಶ್ ಎನ್. ಆರ್.

Related