ಮಹದೇವಪು ಶಾಸಕ ಮತ್ತು ಮಹಿಳೆ ನಡುವೆ ಜಟಾಪಟಿ!

ಮಹದೇವಪು ಶಾಸಕ ಮತ್ತು ಮಹಿಳೆ ನಡುವೆ ಜಟಾಪಟಿ!

 

ಬೆಂಗಳೂರು, ಕೆ.ಆರ್.ಪುರಂ: ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ನಗರದಲ್ಲಿನ ಲೇಔಟ್ ಗಳು, ಅಪಾರ್ಟ್ಮೆಂಟ್ ಗಳು, ಮನೆಗಳಿಂದ ಹೊರಬರಲು ಮತ್ತು ಅಲ್ಲೇ ಇರಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು, ಮುಳಗಡೆಯಾಗಿದ್ದ ಪ್ರದೇಶಗಳಿಗೆ ಶಾಸಕ ಅರವಿಂದ ಲಿಂಬಾವಳಿ ಮತ್ತು ಅಧಿಕಾರಿಗಳು ರೌಂಡ್ಸ್ ಮಾಡುವ ವೇಳೆಯಲ್ಲಿ ಮಹಿಳೆಯೊಬ್ಬರ ಮನವಿ ನೀಡಲು ಮುಂದಾದಗ ಶಾಸಕಅರವಿಂದ ಲಿಂಬಾವಳಿ ಮತ್ತು ಮಹಿಳೆ ನಡುವೆ ತೀವ್ರ ವಾಗ್ವದ ನಡೆದು ಮಹಿಳೆ ಬಳಿಯಿಂದ ದಾಖಲೆಗಳನ್ನ ಕಸಿದುಕೊಳ್ಳಲು ಯತ್ನಿಸಿ,‌ ಪೊಲೀಸರಿಗೆ ಮಹಿಳೆಯನ್ನ ಠಾಣೆಗೆ ಕರೆದೊಯ್ಯುವಂತೆ  ತಾಕೀತು ಮಾಡಿದ್ದರು. ಅಪಮಾನಕ್ಕೊಳಗಾದ ಮಹಿಳೆ‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೂರು ನೀಡಿದ ಮಹಿಳೆ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷೆಯಾಗಿದ್ದು, ನಮ್ಮ ಶಾಸಕರಿಗೆ ಏಕ ವಚನದಲ್ಲಿ ನಿಂದಿಸಿ,  ಪ್ರಚೋದಿಸಿದರೆಂದು ಬಿಜೆಪಿ ಮುಖಂಡರುಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಇದೇ ವೇಳೆ ಲಿಂಬಾವಳಿ ಕ್ಷೇಮೆಯಾಚಿಸುತ್ತೇನೆ ಆ ಮಹಿಳೆ ಒತ್ತುವರಿ ಬಿಡ್ತಾರಾ ಎಂದು ಮರು ಪ್ರಶ್ನಿಸಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನ‌ ಮಹದೇವಪುರದ ಹಲವು ಪ್ರದೇಶಗಳಲ್ಲಿ ಹಿಂದೆಂದು ಕಾಣದ ರೀತಿಯಲ್ಲಿ ಮಳೆಯಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾದವು. ಲೇ ಔಟ್ ಗಳಿಗೆ ನೀರು ನುಗ್ಗಿತು,  ರಸ್ತೆಗಳು‌ ಕೆರೆಗಳಾದವು, ವೈಟ್ ಪೀಲ್ಡ್ ಗೆ ಸಮೀಪದ TZ ಲೇ ಔಟ್ ಗೆ ನೀರು ನುಗ್ಗಿ ಜನ ಒಳಗೂ ಇರಲು ಆಗದೇ ಹೊರಗು ಬರಲಾಗದೇ ಪರದಾಡಿದರು.

ಶಾಸಕ.ಅರವಿಂದ ಲಿಂಬಾವಳಿ ಮತ್ತು ಅಧಿಕಾರಿಗಳು ಕ್ಷೇತ್ರ ವೀಕ್ಷಣೆಗೆ ಎರಡು ದಿನಗಳಿಂದೆ ತೆರಳಿದಾಗ ವರ್ತೂರು ಕೆರೆ ಕೋಡಿ ಭಾಗದಲ್ಲಿ TZ ಅಪಾರ್ಟ್ಮೆಂಟ್ ಗೆ ನೀರು ನುಗ್ಗಿತ್ತು ಈ‌ ಭಾಗದಲ್ಲಿ ವೀಕ್ಷಣೆ ಮಾಡುತ್ತಿದ್ದ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಬ್ಬರು ಮನವಿ ಪತ್ರವೊಂದನ್ನ ನೀಡಲು ಮುಂದಾದರು ಈ ಸಂದರ್ಭದಲ್ಲಿ ಮಹಿಳೆ ಮತ್ತು ಶಾಸಕ ಅರವಿಂದ ಲಿಂಬಾವಳಿ ನಡುವೆ ವಾಗ್ವಾದ ಆರಂಭವಾಗಿ ತಾರಕಕ್ಕೋಗಿ ಏಕ ವಚನದಲ್ಲೇ ಎರಡು ವಾಕ್ಸಮರ ನಡೆಯಿತು ಮಹಿಳೆ ಬಳಿಯಿದ್ದ ದಾಖಲಾತಿ ಕಸಿದುಕೊಳ್ಳಲು ಮುಂದಾದಗ ಮತ್ತಷ್ಟು ಮಾತುಗಳ‌ ಭರಾಟೆ ಜೋರಾಗಿ‌ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ‌ ಅರವಿಂದ ಲಿಂಬಾವಳಿಯವರಿಗೆ ಸರಿಯಾಗಿ ಮಾತಾನಾಡುವಂತೆ ತಾಕೀತು ಮಾಡಿದರು,‌ ಕೊನೆಗೆ ಲಿಂಬಾವಳಿ ಈ‌ ಮಹಿಳೆಯನ್ನ ಠಾಣೆಗೆ ಕರೆದೋಯ್ಯುವಂತೆ ಪೊಲೀಸರಿಗೆ ತಾಕೀತು ಮಾಡಿದರು. ಅಂದೇ ಸಂಜೆ ಆ ಮಹಿಳೆ ವೈಟ್ ಪೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನೂ ಇದೇಲ್ಲ ಬೆಳವಣಿಗೆಗಳ ನಡುವೆ ಮಹದೇವಪುರ ಬಿಜೆಪಿ ಮಂಡಲ‌ ಅಧ್ಯಕ್ಷ ಮನೋಹರ ರೆಡ್ಡಿ ಮತ್ತಿತರರು ಪತ್ರಿಕಾಗೋಷ್ಠಿ ನಡೆಸಿ  ದೌರ್ಜನ್ಯಕ್ಕೋಳಗಾದ ಮಹಿಳೆ‌ ಸಾಮಾನ್ಯ ಮಹಿಳೆಯಲ್ಲ  ವೈಟ್ ಪೀಲ್ಡ್ ಬ್ಲಾಕ್ ಕಾಂಗ್ರೇಸ್ ನ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷೆ ಸಗಾಯಿ ಮೇರಿ ಈಕೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವ ಪೊಟೋಗಳನ್ನ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿ ಸಗಾಯಿ ಮೇರಿ ಬೇಕಂತಲೇ ಶಾಸಕ ಅರವಿಂದ ಲಿಂಬಾವಳಿ ವಿರುದ್ದ ಕೂಗಾಡಿ ಏಕ ವಚನದಲ್ಲಿ ಬೈದು ನಮ್ಮ ಶಾಸಕರನ್ನ ಪ್ರಚೋದಿಸಿದರೆಂದು ಮಹಿಳೆ ವಿರುದ್ಧ  ಮಹದೇವಪುರ ಬಿಜೆಪಿ ಮಂಡಲ‌ ಅಧ್ಯಕ್ಷ ಮನೋಹರರೆಡ್ಡಿ  ಪ್ರತ್ಯಾರೋಪ ಮಾಡಿದರು

ಇದೀಗ ಘಟನೆಗೆ ಸಂಬಂದಿಸಿ ಶಾಸಕ ಅರವಿಂದ ಲಿಂಬಾವಳಿ ಮಾತಾನಾಡಿ ಒಬ್ಬರು ಒತ್ತುವರಿ ನೂರಾರು ಜನರಿಗೆ ತೊಂದರೆ ಕೋಡುವುದು ಎಷ್ಟು ಸರಿಯೆಂದು ಪ್ರಶ್ನಿಸಿ, ಸುರ್ಜೇವಾಲಾರ ಟ್ಬೀಟ್ ಗೆ ಪ್ರತಿಕ್ರಿಯಿಸಿ ಕ್ಷಮಾಪಣೆಗೆ ಸಿದ್ದ ಆದ್ರೇ ಸುರ್ಜೇವಾಲಾ‌ ಒತ್ತುವತಿ ತೆರೆವು ಮಾಡ್ಸತಾರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಇದೀಗ ಪ್ರತಿಪಕ್ಷ ಕಾಂಗ್ರೇಸ್ ಗೆ ಬಿಜೆಪಿ ವಿರುದ್ದ ಮತ್ತೊಂದು ಪ್ರಬಲ ಅಸ್ತ್ರ ದೊರೆತಾಂಗಿದೆ.

Related