‘ಮಧುಗಿರಿ ಮೋದಿ’ ಅರೆಸ್ಟ್

‘ಮಧುಗಿರಿ ಮೋದಿ’ ಅರೆಸ್ಟ್

ತುಮಕೂರು,ಫೆ. 26 : ಫೇಸ್ಬುಕ್ ಅಕೌಂಟ್ ಮೂಲಕ ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿ ಅವಹೇಳನಕಾರಿ ಹೇಳಿಕೆ ನೀಡಿ ಪ್ರವಾದಿಗಳಿಗೆ, ಧರ್ಮಗುರುಗಳಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಮಧುಗಿರಿಯ ದೊಡ್ಡೇರಿ ಹೋಬಳಿ ಹೊನ್ನಾಪುರ ಗ್ರಾಮದ ಅತುಲ್ಕುಮಾರ್ ಸಬರವಾಲ್ ಅಲಿಯಾಸ್ ಮಧುಗಿರಿ ಮೋದಿ ಬಂಧಿತ ವ್ಯಕ್ತಿಯಾಗಿದ್ದು, ಈತನಿಂದ ಎರಡು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫೆ.10ರಂದು ಫೇಸ್ಬುಕ್ ಅಕೌಂಟ್ ಮೂಲಕ ಒಂದು ಕೋಮಿನ ಬಗ್ಗೆ ಈತ ಅವಹೇಳನಕಾರಿ ಹೇಳಿಕೆ ಹಾಗೂ ಪ್ರವಾದಿಗಳಿಗೆ ಅವಮಾನ ಮಾಡಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದನು. ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಧುಗಿರಿ ಪೊಲೀಸ್ ಠಾಣೆಗೆ ಬಂದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದರು.

Related