ಮಾ. ನಲ್ಲಿ ಬಿಬಿಎಂಪಿ ಬಜೆಟ್

ಮಾ. ನಲ್ಲಿ ಬಿಬಿಎಂಪಿ ಬಜೆಟ್

ಬೆಂಗಳೂರು, ಫೆ. 3 : ರಾಜ್ಯ ಸರ್ಕಾರದ 2020-21ರ ಸಾಲಿನ ಬಜೆಟ್ ಮಂಡನೆ ಬೆನ್ನಲ್ಲೇ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಮಾ.5ರಂದು ರಾಜ್ಯ ಬಜೆಟ್ ಸಿಎಂ ಬಿ.ಎಸ್ ಯಡಿಯೂರಪ್ಪ ಮಂಡಿಸಲಿದ್ದಾರೆ. ಬೆನ್ನಲ್ಲೇ ಮಾರ್ಚ್ ಎರಡನೇ ವಾರದಲ್ಲಿ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ತೆರಿಗೆ, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಈ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. 2019-20ನೇ ಸಾಲಿನ ಬಜೆಟ್ ಫೆ. 19ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆರಂಭದಲ್ಲಿ 10,688 ಕೋಟಿ ರೂ. ಇದ್ದ ಬಜೆಟ್ಗೆ ಕೆಲ ಮಾರ್ಪಾಡುಗಳನ್ನು ಮಾಡಿದ್ದರಿಂದ ಮೊತ್ತ 12,74.77 ಕೋಟಿ ರೂ.ಗೆ ಹಿಗ್ಗಿತ್ತು. ಈ ಪರಿಷ್ಕ್ರತ ಬಜೆಟ್ಗೆ ಪಾಲಿಕೆಯ ಕೌನ್ಸಿಲ್ ಒಪ್ಪಿಗೆ ನೀಡಿತ್ತು. ಬಿಬಿಎಂಪಿ ಇತಿಹಾಸದಲ್ಲಿ 12,574 ಕೋಟಿ ರೂ. ವೆಚ್ಚದ ಬೃಹತ್ ಬಜೆಟ್ ಮಂಡಿಸಿರುವುದು ಇದೇ ಮೊದಲು ಆಗಿತ್ತು. ಈಗ 4 ಸಾವಿರ ಕೋಟಿ ಇಳಿಸಿ ಎಂದು ಆರ್ಥಿಕ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ 9,0574 ಕೋಟಿ ರೂ.ಗೆ ಇಳಿಕೆಯಾಗಿತು. ಈ ಬಾರಿಯೂ 2020-21ರ ಪಾಲಿಕೆ ಬಜೆಟ್ 10 ಸಾವಿರ ಕೋಟಿ ತಲುಪುವ ಸಾಧ್ಯತೆ ಇದೆ.

Related