ಎಲ್‍ಪಿಜಿ ಸಿಲಿಂಡರ್ ದರ ಹೆಚ್ಚಳ

ಎಲ್‍ಪಿಜಿ ಸಿಲಿಂಡರ್ ದರ ಹೆಚ್ಚಳ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೋರೇಷನ್ ದೇಶಾದ್ಯಂತ ಎಲ್‍ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿದ್ದು, ಇಡೀ ದೇಶದ ಜನತೆಗೆ ಬಿಗ್ ಶಾಕ್ ನೀಡಿದೆ.

ದೇಶೀಯ ಬಳಕೆಯ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ (ಸಬ್ಸಿಡಿ ರಹಿತ) ಬೆಲೆಯನ್ನು 50 ರೂ. ಹೆಚ್ಚಿಸಲಾಗಿದ್ದು, 5 ಕೆಜಿ ಸಿಲಿಂಡರ್ ಬೆಲೆಯನ್ನು 18 ರೂ.ಗೆ ಏರಿಸಲಾಗಿದೆ. ಅದೇ ರೀತಿ 19 ಕೆಜಿ ಸಿಲಿಂಡರ್ ದರವನ್ನು 36.50 ರೂ.ಗೆ ಹೆಚ್ಚಳ ಮಾಡಲಾಗಿದೆ.

ಅಂದ್ಹಾಗೆ, ಈ ಬೆಲೆ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಈ ಹಿಂದೆ 594 ರೂ.ಯಿದ್ದ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ಈಗ 644 ರೂ. ಆಗಿದೆ. ಹಾಗೆಯೇ ಕೋಲ್ಕತದಲ್ಲಿ 620.50 ರೂ. ಇದ್ದ ಸಿಲಿಂಡರ್ ಬೆಲೆ 670.50 ರೂಪಾಯಿಯಾಗಿದೆ.

Related