ಕಾಮುಕನ ಕಿಸ್ ಗೆ ಶಾಕ್

ಕಾಮುಕನ ಕಿಸ್ ಗೆ ಶಾಕ್

ಮುಂಬೈ, ಫೆ. 07 : ಯುವತಿಯ ಹಿಂಭಾಗವನ್ನು ಅಸಭ್ಯವಾಗಿ ಟಚ್ ಮಾಡಿ, ಕಿಸ್ ಮಾಡಿರುವ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಮುಕನೊಬ್ಬ ರೈಲ್ವೆ ನಿಲ್ದಾಣದ ಸೇತುವೆಯ ಮೇಲೆ ಜ. 25 ರಂದು ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಕಾಮುಕ ಯುವಕ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿರುವುದನ್ನು ಕಾಣಬಹುದು. ಯುವಕ ಯಾವುದೇ ಭಯವಿಲ್ಲದೆ ಒಂಟಿಯಾಗಿ ಹೋಗುತ್ತಿದ್ದ ಯುವತಿಯ ಬಳಿ ಓಡಿ ಹೋಗಿದ್ದಾನೆ. ನಂತರ ಕ್ಷಣಾರ್ಧದಲ್ಲಿ ಆಕೆಗೆ ಕಿಸ್ ಮಾಡಿ ಹಿಂಭಾಗವನ್ನು ಸ್ಪರ್ಶಿಸಿ ಪರಾರಿಯಾಗಿ
ಮಾಟುಂಗಾದ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾನೆ. ಗುರುವಾರ ಪ್ರತ್ಯೇಕ ಕಳ್ಳತನ ಪ್ರಕರಣದಲ್ಲಿ ಆರೋಪಿ ಕಾಮುಕನನ್ನು ಬಂಧಿಸಲಾಗಿತ್ತು. ಆಗ ಯುವತಿಗೆ ಮುತ್ತು ಕೊಟ್ಟು ಎಸ್ಕೇಪ್ ಆಗಿದ್ದ ಆರೋಪಿ ಈತನೇ ಎಂದು ಗುರುತಿಸಲಾಗಿದೆ. ಆದರೆ ಆರೋಪಿಯ ವಿರುದ್ಧ ಕಳ್ಳತನದ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related