ರಾಜ್ಯದ ರಾಜಧಾನಿಯಲ್ಲಿ ಲೋಕಾಯುಕ್ತ ದಿಡೀರ್ ದಾಳಿ

ರಾಜ್ಯದ ರಾಜಧಾನಿಯಲ್ಲಿ ಲೋಕಾಯುಕ್ತ ದಿಡೀರ್ ದಾಳಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಎಂಟು ವಲಯಗಳ ಕಚೇರಿ ಮೇಲೆ ದಿಡೀರ್ ಏಕಾಏಕಿ ಲೋಕಾಯುಕ್ತ ದಾಳಿ ನಡೆಸಿದೆ. ಲೋಕಾಯುಕ್ತ ದಿಡೀರ್ ದಾಳಿಯಿಂದ ಬಿಬಿಎಂಪಿ ಅಧಿಕಾರಿಗಳು ಹೈರಾಣಗೊಂಡಿದ್ದಾರೆ.

ಈ ಬಾರಿ ಲೋಕಾಯುಕ್ತ ಟಾರ್ಗೆಟ್ ಮಾಡಿ ದಾಳಿ ಮಾಡಿರೋದು ನಗರಯೋಜನೆ ವಿಭಾಗದ ಮೇಲೆ. ಬಿಬಿಎಂಪಿಯ ಅತ್ಯಂತ ಭ್ರಷ್ಟ ವಿಭಾಗ ಎಂದೆನಿಸಿಕೊಂಡಿರುವ ನಗರಯೋಜನೆ ವಿಭಾಗದಲ್ಲಿ ಕಟ್ಟಡ ನಿರ್ಮಾಣ ಸಂಬಂಧ ನಕ್ಷೆ ಮಂಜೂರಾತಿ ವಿಚಾರದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕೇಳಿಬಂದ ದೂರುಗಳನ್ನು ಕ್ರೋಢೀಕರಿಸಿ ದಿಢೀರ್ ಏಕಕಾಲ ಕ್ಕೆ ದಾಳಿ ನಡೆಸಲಾಗಿದೆ.

ಡಿವೈಎಸ್ಪಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಕ್ರಮ ನಡೆಯುತ್ತಿರುವುದು ಸಾಕ್ಷ್ಯ ಸಮೇತ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಅನೇಕ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ. ನಗರಯೋಜನೆ ಅಷ್ಟೇ ಅಲ್ಲ ಕಂದಾಯ ವಿಭಾಗವನ್ನು ಟಾರ್ಗೆಟ್ ಮಾಡಿಕೊಂಡು ಆರ್ ಓ ಮತ್ತು ಎಆರ್ ಓ ಕಚೇರಿಗಳ ಮೇಲೂ ದಾಳಿ ನಡೆದಿದೆ. ಉಪಲೋಕಾಯುಕ್ತರು ಕೂಡ ದಾಳಿಯಲ್ಲ ಪಾಲ್ಗೊಂಡಿದ್ದುದು..ಇಂದು ಕೂಡ ದಾಳಿ ಮುಂದುವರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Related