ಪಿಡಿಒ ಆಡಳಿತ ವೈಖರಿ ಖಂಡಿಸಿ ಕಚೇರಿಗೆ ಬೀಗ

ಪಿಡಿಒ ಆಡಳಿತ ವೈಖರಿ ಖಂಡಿಸಿ ಕಚೇರಿಗೆ ಬೀಗ

ಕುಣಿಗಲ್ : ಪಿಡಿಒ ಆಡಳಿತ ವೈಖರಿ ಖಂಡಿಸಿ ಕೆಂಪನಹಳ್ಳಿ ಗ್ರಾಪಂ ಸದಸ್ಯರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು. ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಪಂಯಲ್ಲಿ ಕಳೆದ ಸುಮಾರು ನಾಲ್ಕು ವರ್ಷಗಳಿಂದ ಠಿಕಾಣಿ ಊರಿರುವ ಪಿಡಿಒ ಹೊನ್ನಪ್ಪ ಅವರು ಚುನಾಯಿತ ಸದಸ್ಯರು ಹೇಳುವ ಗ್ರಾಮದ ಸಮಸ್ಯೆಗೆ ಸ್ಪಂಸದೆ, ಸಮಸ್ಯೆಗಳನ್ನು ಸಮನಾಗಿ ಕಾಣದೆ, ಕಾಂಗ್ರೆಸ್ ಪಕ್ಷದ ಏಜೆಂಟರ ರೀತಿ ವರ್ತಿಸುತ್ತಿದ್ದು, ಗ್ರಾಮಗಳ ನೈರ್ಮಲ್ಯಕ್ಕೆ ಒತ್ತುಕೊಡದೆ ಬರೀ ಒಳರಾಜಕೀಯ ಮಾಡುತ್ತ ಪಂಚಾಯಿತಿಯ 14 ಮತ್ತು 15ನೇ ಹಣಕಾಸು ಯೋಜನೆಯ ನಿರ್ವಹಣೆಯನ್ನು ಸರ್ಪಕವಾಗಿ ಮಾಡುವಲ್ಲಿ ವಿಫಲರಾಗಿದ್ದಾರೆ. ಇಒ ಅವರಿಗೂ ಈ ಕುರಿತು ದೂರು ನೀಡಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡಮಾಡಿದೆ ಎಂದು ಕೆಲ ಸದಸ್ಯರು ಆಪಾದಿಸಿದ್ದಾರೆ.

ಸದಸ್ಯರಲ್ಲೆ ಭಿನ್ನಮತ ಸೃಷ್ಠಿ

ಲೆಕ್ಕಪತ್ರ ಕೇಳಿದರೆ ಉಡಾಫೆ ಉತ್ತರ ಕೊಡುವ ಹಾಗೂ ಸದಸ್ಯರಲ್ಲೆ ಭಿನ್ನಮತ ಸೃಷ್ಠಿಸಿ ಬೇಕಾದ ಕೆಲವರಿಗೆ ಕಾಮಗಾರಿ ಮಾಡಲು ಅವಕಾಶ ನೀಡಿ, ನಮ್ಮ ಬ್ಲಾಕ್‌ಗಳ ಅಭಿವೃದ್ಧಿಗೆ ಸಹಕಾರ ನೀಡದೆ ಸಬೂಬು ಹೇಳುತ್ತ ಕಾಲಹರಣ ಮಾಡುವ ಇಂತಹ ಪಿಡಿಒ ನಮಗೆ ಬೇಡವೇ ಬೇಡ ಎಂದು ಸದಸ್ಯರಾದ ಮಂಜುನಾಥ್, ನಾಗರಾಜ್, ಸರಸ್ವತಿ ಆರೋಪಿಸಿದರು. ಠರಾವು ಪುಸ್ತಕವನ್ನು ಪಂಚಾಯಿತಿಯಲ್ಲಿ ಇಟ್ಟು ನಿರ್ವಹಣೆ ಮಾಡದೆ ಕುಣಿಗಲ್ ನಗರದಲ್ಲಿ ಕೂತು ಅಲ್ಲೆ ಸಭೆ ಮಾಡುತ್ತ ಅಲ್ಲೇ ದಾಖಲೆ ಬರೆಯತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ರೆಹಮಾನ್, ಕುಮಾರ್, ಆಂಜನಪ್ಪ, ಸರೋಜಮ್ಮ ಹಾಗೂ ಮುಖಂಡರಾದ ಯಾಕುಪಾಷ, ರಫೀಕ್, ಸಲ್ಮಾನ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಕಾಂಗ್ರೆಸ್ ಕೈ ಗೊಂಬೆ

ಸರ್ಕಾರಿ ಅಧಿಕಾರಿಯಾದವರು ಸಾರ್ವಜನಿಕರ ಸೇವೆ ಮಾಡಲು ಬಂದಿರುವ ಚುನಾಯಿತ ಸದಸ್ಯರು ಹೇಳುವ ಅವರ ಭಾಗದ ಸಮಸ್ಯೆಗಳನ್ನು ಗಮನಹರಿಸಿ ಯಾವುದು ಮುಖ್ಯ ಎಂದು ಪರಿಗಣಿಸಿ ಅಂತಹ ಕೆಲಸ ಮಾಡಲು ಆದ್ಯತೆ ನೀಡಬೇಕು, ಆದರೆ ಇವರು ಇಲ್ಲಿನ ಅಧ್ಯಕ್ಷರ ಹಾಗೂ ಕಾಂಗ್ರೆಸ್ ಪಕ್ಷದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ತಪ್ಪುಗಳನ್ನು ಪ್ರಶ್ನಿಸಿದರೆ ನಾನು ಹಿಂದುಳಿದ ವರ್ಗದ ಅಧಿಕಾರಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತೀರ? ಇದಕ್ಕೆ ನಾನು ಹೆದರಲ್ಲ, ನಾನೂ ಕೂಡ ದೂರು ನೀಡುತ್ತೇನೆ ಎನ್ನುತ್ತಾರೆ.

Related