ಪತ್ರಿಕೆಗಳನ್ನು ಕೊಂಡು ಓದುವ ಸಂಸ್ಕೃತಿ ಬೆಳೆಯಲಿ

ಪತ್ರಿಕೆಗಳನ್ನು ಕೊಂಡು ಓದುವ ಸಂಸ್ಕೃತಿ ಬೆಳೆಯಲಿ

ಬೆಂಗಳೂರು, ಫೆ. 06: ಪ್ರಸ್ತುತ ಕಾಲಘಟ್ಟದಲ್ಲಿ ದಿನಪತ್ರಿಕೆಗಳು ಜನಸಾಮಾನ್ಯರಿಗೆ ಬಹಳಷ್ಟು ಉಪಯುಕ್ತವಾರಿಯಾಗಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪತ್ರಿಕೆಗಳು ಸಹಾ ಹೆಚ್ಚು ಸಹಕಾರಿಯಾಗಿವೆ ಎಂದು ಕೌಶಲ್ಯಾಭಿವೃದ್ಧಿಯ ರಾಜ್ಯಾಧ್ಯಕ್ಷೆ ಕೆ. ರತ್ನಪ್ರಭಾ ತಿಳಿಸಿದರು.

ಕನ್ನಡ ದಿನಪತ್ರಿಕೆ ಪ್ರಜಾವಾಹಿನಿ ಕಚೇರಿಯಲ್ಲಿ ನೂತನವಾಗಿ ವೆಬ್‌ಸೈಟ್, ಇ-ಪೇಪರ್ ಹಾಗೂ ಯೂಟೂಬ್ ಚಾನಲ್ ಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಸಾಕಷ್ಟು ಪತ್ರಿಕೆಗಳು ಹೊರ ಬರುತ್ತಿವೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳೂ ಸಹಾ  ಬೇರೆ ಬೇರೆ ದಿನ ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ರಾಜ್ಯ ಮಟ್ಟದಲ್ಲಿ ಪ್ರಜಾವಾಹಿನಿ ದಿನ ಪತ್ರಿಕೆಯೂ ಸಹಾ ಒಂದಾಗಲಿದ್ದು,  ಅದನ್ನು ಕೊಂಡು ಓದುವ ಮೂಲಕ ಸಾರ್ವಜನಿಕರು ದಿನನಿತ್ಯದ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.

ಜೊತೆಗೆ ಪ್ರಜಾವಾಹಿನಿ ಪತ್ರಿಕೆಯನ್ನು ಎಲ್ಲರೂ ಕೊಂಡು ಓದುವ ಮೂಲಕ ಪತ್ರಿಕೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕೆಂದು ತಿಳಿಸಿದರು.

ಈ ಜಗತ್ತಿನಲ್ಲಿ ಅನೇಕ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗುತ್ತ ಬದಲಾವಣೆಗೆ ಹೊಂದಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪತ್ರಿಕೆಯ ವೆಬ್‌ಸೈಟ್, ಇ-ಪತ್ರಿಕೆ, ಚಾನಲ್‌ಗಳು ಚಾಲನೆಗೊಂಡಿರುವುದು ನಿಜಕ್ಕೂ ಸಂತಸ. ಇದರಿಂದ ಬಹುಸಂಖ್ಯೆಯಲ್ಲಿ ಜನರನ್ನು ತಲುಪಬಹುದಾಗಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಜಾವಾಹಿನಿ ಪತ್ರಿಕೆಯ ಸಂಪಾದ ಹಾಗೂ ಮುಖ್ಯಸ್ಥ ನಕಿರೆಕಂಟಿ ಸ್ವಾಮಿ, ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

 

Related