ಕೋಲಾರ ಕೃಷಿ ಮಾದರಿಯಾಗಲಿ

ಕೋಲಾರ ಕೃಷಿ ಮಾದರಿಯಾಗಲಿ

ವಿಜಯಪುರ : ರಾಜ್ಯದ ಕೃಷಿ ಅಭ್ಯುದಯಕ್ಕೆ ಇಸ್ರೇಲ್ ಗಿಂತ ಸಮಗ್ರ ಕೃಷಿಯ ಕೋಲಾರ ಮಾದರಿಯಾಗಲಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಮಂಗಳವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಬಸರಕೋಡ ಗ್ರಾಮದ ಪ್ರಗತಿಪರ ರೈತ ಪವಾಡೆಪ್ಪ ಅವರ ಸಮಗ್ರ ಕೃಷಿ ಮಾದರಿಯ ತೋಟಕ್ಕೆ ಭೇಟಿ ನೀಡಿ ರೈತನ ಅನುಭವ ಕೇಳಿ ತಿಳಿದರು.

ರಾಜ್ಯದ ರೈತರು ಸಾವಯವ ಪದ್ಧತಿಯ ಸಮಗ್ರ ಕೃಷಿ ಮಾಡಿದಲ್ಲಿ ಕೃಷಿಯಲ್ಲಿ ವೆಚ್ಚ ಕಡಿಮೆ ಮಾಡಿ, ಲಾಭ ಗಳಿಸಲು ಸಾಧ್ಯ. ರೈತರ ಕಷ್ಟ ಪರಿಹಾರ ಆಗುತ್ತದೆ. ಸಾವಯವದ ಸಮಗ್ರ ಕೃಷಿಗೆ ಒತ್ತು ನೀಡಬೇಕು ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಜೊತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಥಳೀಯ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇವರು ರೈತ ಪವಾಡೆಪ್ಪ ಸಾವಯವ ಪದ್ಧತಿಯಲ್ಲಿ ಬೆಳೆದ ಬಾಳೆ ಸೇವಿಸಿದರು.

Related