ತಾಕತ್ತು ಇದ್ರೆ ಬಸವರಾಜ್ ಬೊಮ್ಮಾಯಿ ಗೆಲ್ಲಲಿ: ರಾಮಣ್ಣ ಲಮಾಣಿ

ತಾಕತ್ತು ಇದ್ರೆ ಬಸವರಾಜ್ ಬೊಮ್ಮಾಯಿ ಗೆಲ್ಲಲಿ: ರಾಮಣ್ಣ ಲಮಾಣಿ

ಗದಗ: ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ದಿನದಿಂದ ದಿನಕ್ಕೆ ರಂಗೆರುತ್ತಿದ್ದು, ಬಿಸಿಲಿನ ಕಾವಿನ ಜೊತೆಗೆ ಚುನಾವಣೆಯ ಕಾವು ಕೂಡ ತೀವ್ರತೆವನ್ನು ತಲುಪುತ್ತಿದೆ. ಆರೋಪ, ಪ್ರತ್ಯಾರೋಪ ಮಾಡುತ್ತಲೇ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಬಾರಿ ತಾಕತ್ತಿದ್ರೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಶಿರಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಬೊಮ್ಮಾಯಿ ಅವರಿಗೆ ಸವಾಲ್ ಹಾಕಿದ್ದಾರೆ.

ಶಿರಹಟ್ಟಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಾಟ ಮಾಡಿದ್ದಾರೆ. ಹಣಕ್ಕಾಗಿ ಅಂದಿನ ಸಿಎಂ ಬೊಮ್ಮಾಯಿ BJP ಟಿಕೆಟ್​​ ಮಾರಿದ್ದರು ಎಂದು ಬೊಮ್ಮಾಯಿ ವಿರುದ್ಧ ರಾಮಣ್ಣ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ.

ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವ್ರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಮ್ಮ ಕ್ಷೇತ್ರದ ಅಲ್ಲದವ್ರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಬಿಜೆಪಿಯಲ್ಲಿ ಶ್ರಮಪಟ್ಟು ಪಕ್ಷ ಕಟ್ಟಿದ್ದೆ. ಟಿಕೆಟ್ ತಪ್ಪಿದ ಬಳಿಕ ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದರು.

 

Related