ನಿಂಬೆಹಣ್ಣಿನಲ್ಲಿದೆ ಹಲವಾರು ಔಷಧಿಯ ಗುಣಗಳು

ನಿಂಬೆಹಣ್ಣಿನಲ್ಲಿದೆ ಹಲವಾರು ಔಷಧಿಯ ಗುಣಗಳು

ಲಿಂಬೆಹಣ್ಣು ಸಾಮಾನ್ಯವಾಗಿ ಎಲ್ಲಾ ಋತುಮಾನಗಳಲ್ಲಿ ಸಿಗುವಂತ ಹಣ್ಣಾಗಿದ್ದು, ಈ ಲಿಂಬೆ ಹಣ್ಣನ್ನು ನಾವು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಕಾಡುವಂತಹ ಸಮಸ್ಯೆಗಳನ್ನು ನಾವು ನಿವರಿಸಿಕೊಳ್ಳಬಹುದು.

ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಮುಖ ಕಾಂತಿ ಹೆಚ್ಚಿಸಲು, ಕೂದಲು ಮತ್ತು ನಮ್ಮ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳಿಗೆ ಈ ನಿಂಬೆಹಣ್ಣು ಮಾಹಾ ಔಷದಿಯಾಗಿದೆ.

ಹೌದು, ನಿಂಬೆಹಣ್ಣಿನಲ್ಲಿ ಹುಳಿ ಅಂಶ ಇರೋದರಿಂದ ಇದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದೆ. ಹಾಗಾಗಿ ನಾವು ನಿಂಬೆಹಣ್ಣಿನ ಜ್ಯೂಸ್ ಅಥವಾ ಆಹಾರದಲ್ಲೂ ಕೂಡ ಬೆರೆಸಿ ಸೇವನೆ ಮಾಡುವುದು.

ಇನ್ನು ನಿಂಬೆಹಣ್ಣು ಜೀರ್ಣಶಕ್ತಿವರ್ಧಕ, ತದ್ರಿದೋಷನಾಶಕ, ಬುದ್ಧಿವರ್ಧಕ, ಕಣ್ಣಿನ ರೋಗ, ಆಯಾಸ, ಬಿಕ್ಕಳಿಕೆ, ವಾಂತಿ, ಕಾಮಾಲೆ, ಮಿತಿಮೀರಿದ ಪಿತ್ತದೋಷ ಎಲ್ಲವನ್ನೂ ಶಾಂತಗೊಳಿಸುತ್ತದೆ. ರಕ್ತವನ್ನು ಶುದ್ಧಗೊಳಿಸುವ ಕಾರ್ಯ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎಲ್ಲದಕ್ಕೂ ನಿಂಬೆಹಣ್ಣು ಹಿತಕರವಾದದ್ದು. ಇದರಲ್ಲಿ ತೇವಾಂಶ, ಸಸಾರಜನಕ, ಕೊಬ್ಬು , ನಾರಿನಂಶ, ಶರ್ಕರ ಪಿಷ್ಠ, ಕ್ಯಾಲ್ಸಿಯಂ ಎ ಮತ್ತು ಸಿ ಜೀವಸತ್ವ ಸಿಗುತ್ತವೆ.

ಕಣ್ಣು ಮಂಜಾಗುವುದು, ತಲೆಸುತ್ತಿ ಬೀಳುವಂತಾಗುವುದು. ಈ ರೀತಿ ಆದಾಗ ಒಂದು ಲೋಟ ಬಿಸಿನೀರಿಗೆ ನಿಂಬೆರಸವನ್ನು ಹಾಕಿ ಕುಡಿದಾಗ ಬಹಳ ಹಿತವಾಗುವುದು.

ಮಲೇರಿಯಾ ಜ್ವರ ಬಂದಾಗ, ಒಂದು ಲೀಟರ್ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ಕುದಿಸಿ ಅರ್ಧ ಲೀಟರ್ ಆಗುವವರೆಗೂ ಇಂಗಿಸಿ, ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಸೇವಿಸಿದರೆ ಅನುಕೂಲವಾಗುವುದರ ಜೊತೆಗೆ, ನಿಂಬೆರಸಕ್ಕೆ ಸ್ವಲ್ಪ ಈರುಳ್ಳಿ ರಸ ಬೆರೆಸಿ ಸೇವಿಸಿದರೆ, ಉತ್ತಮವಾಗುತ್ತದೆ.

ಚಳಿಗಾಲದಲ್ಲಿ ಚರ್ಮ ಬಿರಿಯುವುದು ಸರ್ವೆಸಾಮಾನ್ಯ. ಹಾಲಿನ ಕೆನೆಗೆ ಸ್ವಲ್ಪ ನಿಂಬೆರಸ ಸೇರಿಸಿ ಮುಖ ಮತ್ತು ಕೈ-ಕಾಲುಗಳಿಗೆ ಹಚ್ಚುತ್ತಾ ಬಂದರೆ ಚರ್ಮ ಬಿರಿಯುವುದಿಲ್ಲ.

ಎದೆಯುರಿಯುವುದಕ್ಕೆ ಜೇನುತುಪ್ಪ ಹಾಗೂ ನಿಂಬೆರಸವನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ಎದೆನೋವು, ತಲೆನೋವು ಹಾಗೂ ಎದೆಯುರಿ ಎಲ್ಲದ್ದಕ್ಕೂ ಒಳ್ಳೆಯದು.

ವಾಂತಿಯಾಗುತ್ತಿದ್ದಾಗ ಏಲಕ್ಕಿ ಹಾಗೂ ಜೀರಿಗೆಯನ್ನು ನಣ್ಣಗೆ ಪುಡಿ ಮಾಡಿ ಒಂದು ಲೋಟ ನೀರಿಗೆ ನಿಂಬೆರಸ ಹಿಂಡಿ, ಈ ಮಿಶ್ರಣವನ್ನು ಗಂಟೆಗೊಮ್ಮೆ ಕುಡಿಯುತ್ತಿದ್ದರೆ ವಾಂತಿ ಹಾಗೂ ಹೊಟ್ಟೆತೊಳಸುವಿಕೆ ಕಡಿಮೆಯಾಗುತ್ತದೆ.

 

Related