ಪೆನ್ ಡ್ರೈವ್ ಬಾಂಬ್ ಸಿಡಿಸಿದ ಲಕ್ಷ್ಮಣ್ ಸೌದಿ!

ಪೆನ್ ಡ್ರೈವ್ ಬಾಂಬ್ ಸಿಡಿಸಿದ ಲಕ್ಷ್ಮಣ್ ಸೌದಿ!

ಅಥಣಿ: ರಾಜ ರಾಜಕಾರಣದಲ್ಲಿ ಮತ್ತೆ ಪೆನ್ ಡ್ರೈವ್ ಸದ್ದು ಮಾಡುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಸದನದಲ್ಲಿ ಪೆನ್ ಡ್ರೈವ್ ಬಗ್ಗೆ ಮಾತನಾಡಿದರು ಇದರ ಬೆನ್ನಲ್ಲೇ ಇಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸೌದಿ ಅವರು ಪೆನ್ ಡ್ರೈವ್ ನನ್ನತ್ರನು ಇದೆ ಎಂದು ಹೇಳಿದ್ದಾರೆ

ಹೌದು, ರಾಜಕೀಯದಲ್ಲಿ ಮತ್ತೆ ಪೆನ್​ಡ್ರೈವ್ ಸದ್ದು ಮಾಡ್ತಿದೆ. ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಪೆನ್​ಡ್ರೈವ್ ತೋರಿಸಿ ಸಂಚಲನ ಸೃಷ್ಟಿಸಿದ್ರೆ, ಈಗ ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿಯೂ ಪೆನ್​ಡ್ರೈವ್ ಬಾಂಬ್ ಹಾಕಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಪೆನ್​ಡ್ರೈವ್ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್​ನ ಕುಮಾರಸ್ವಾಮಿಯವರ ಪೆನ್​ಡ್ರೈವ್​ಗೆ ಪ್ರತಿಯಾಗಿ ಕಾಂಗ್ರೆಸ್​ನ ಲಕ್ಷ್ಮಣ ಸವದಿ ಪೆನ್​ಡ್ರೈವ್ ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ. ನನ್ನ ಬಳಿಯೂ ಪೆನ್​ಡ್ರೈವ್ ಇರೋದು ಸತ್ಯ ಎಂದು ಬೆಳಗಾವಿಯ ಅಥಣಿಯಲ್ಲಿ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೊತೆಗೆ ನನ್ನ ಬಳಿ ಇರುವ ಪೆನ್​ಡ್ರೈವ್​​ನಲ್ಲಿ ಯಾರು ಏನೇನು ಕುತಂತ್ರ ಮಾಡ್ತಿದ್ರು ಅನ್ನೋ ವಿವರವಿದೆ ಎಂದಿದ್ದಾರೆ.

 

Related