ತಡರಾತ್ರಿ ಕಾರ್ಯಾಚರಣೆ : ಅಕ್ರಮ ಮದ್ಯ ವಶ

ತಡರಾತ್ರಿ ಕಾರ್ಯಾಚರಣೆ : ಅಕ್ರಮ ಮದ್ಯ ವಶ

ಕಾರವಾರ : ತಾಲ್ಲೂಕಿನ ಮಾಜಾಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಕಾರ್ಯಾಚರಣೆ ಮಾಡಿದ ಕಾರವಾರ ವಲಯದ ಅಬಕಾರಿ ಇಲಾಖೆ ಅಧಿಕಾರಿಗಳು, ಬರೋಬ್ಬರಿ ರೂ.6.70 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.

ಒಟ್ಟು 1,423 ಲೀಟರ್ ಗೋವಾ ಮದ್ಯ ಹಾಗೂ 228 ಲೀಟರ್ ಗೋವಾ ಬಿಯರ್ ಅನ್ನು ಕಾಡಿನಲ್ಲಿ ಅಡಗಿಸಿಡಲಾಗಿತ್ತು. ಗೋವಾದಲ್ಲಿ ಮದ್ಯದ ದರ ಕಡಿಮೆ ಇದ್ದು, ಅದನ್ನು ಅಕ್ರಮವಾಗಿ ಕಾರವಾರ ಸೇರಿದಂತೆ ಗಡಿ ಭಾಗಗಳಿಗೆ ತಂದು ಕರ್ನಾಟಕದ ದರದಲ್ಲಿ ಮಾರಾಟ ಮಾಡಿ ಹಣ ಗಳಿಸುವ ದಂಧೆ ನಡೆಯುತ್ತಿದೆ.

ಅಕ್ರಮವಾಗಿ ಗೋವಾದಿಂದ ಮದ್ಯವನ್ನು ಕರ್ನಾಟಕದ ಗಡಿಯೊಳಗೆ ತಂದು ದಾಸ್ತಾನು ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Related