ಮಡಿವಾಳ, ಮಾ. 22: ಹೊಸೂರು ಮುಖ್ಯರಸ್ತೆಯಲ್ಲಿರುವ ಮಡಿವಾಳ ಸಂತೆ ಸಂಪೂರ್ಣ ಸ್ಥಬ್ದ. ಯಾವುದೇ ಮಳಿಗೆಗಳು ತೆರೆದಿಲ್ಲ. ಪ್ರತಿನಿತ್ಯ ಲಕ್ಷಾಂತರ ರೂಗಳ ವಹಿವಾಟು ನಡೆಯುವ ಸಂತೆ ಸ್ಥಬ್ದಗೊಂಡಿದೆ.
ಹೊಸುರು ಮುಖ್ಯರಸ್ತೆ ಖಾಲಿ ಖಾಲಿ. ಯಾವುದೇ ಬಂದ್ ಗಳಿಗೆ ಕರೆ ನೀಡಿದ್ದಾಗಲೂ ಇಷ್ಟೊಂದು ಖಾಲಿಯಾಗಿರಲಿಲ್ಲ ಈ ರಸ್ತೆ. ಇಡೀ ಸೀಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಬೆರಳೆಣಿಕೆಯಷ್ಟು ಮಾತ್ರ ವಾಹನಗಳು. ಕೆ.ಆರ್.ಪುರಂ ಕಡೇ ರಸ್ತೆಯು ಖಾಲಿ ಖಾಲಿ. ಜಯನಗರ ಕಡೇಯಿಂದ ಬರುವ ರಸ್ತೆಯಲ್ಲೂ ವಿರಳ ಸಂಚಾರ. ಜನತಾ ಕರ್ಪ್ಯೂಗೆ ಜನರ ಸ್ಪಂಧನೆ.