ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಂಹ ರಥೋತ್ಸವ

ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಂಹ ರಥೋತ್ಸವ

ಬೊಮ್ಮನಹಳ್ಳಿ ಮಾ. 09: 400 ವರ್ಷಗಳ ಇತಿಹಾಸವುಳ್ಳ ಶ್ರೀ ಲಕ್ಷ್ಮೀ ವೆಂಕಟರಮಣ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಪ್ರತಿ ವರ್ಷದಂತೆ ಅತ್ಯಂತ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಪೂಜಾಕೈಂಕರ್ಯ, ಮಂಗಳಕರ ವಾದ್ಯಗಳ ನಾದ ಘೊಷ್ಠಿಗಳ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಬೆಂಗಳೂರು ನಗರ ಸೇರಿದಂತೆ ಹೊರ ರಾಜ್ಯ ಹಾಗೂ ವಿವಿದೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸದ್ಭಕ್ತರನ್ನು ಹೊಂದಿರುವ ವೆಂಕಟರಮಣ ಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದುಕೊಂಡರು

ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 174 ಎಚ್‌ಎಸ್‌ಆರ್ ಲೇಔಟ್ ಅಗರ ಗ್ರಾಮದಲ್ಲಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ರಥೋತ್ಸವದ ಅಂಗವಾಗಿ ವಿಶೇಷವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅಗರ ನಿವಾಸಿ ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ದೇವಾಲಯದ ಟ್ರಸ್ಟಿಗಳಾದ  ಶ್ರೀನಿವಾಸ್ ರೆಡ್ಡಿ ಅವರ ಕುಟುಂಬದ ನೇತೃತ್ವದಲ್ಲಿ ಲಕ್ಷೀ ವೆಂಕಟರಮಣ ದೇವಸ್ಥಾನ ಶ್ರೀ ಸ್ವಾಮಿಯವರಿಗೆ ವಿಶೇಷ ಅಲಂಕಾರ, ದೀಪೋತ್ಸವ ಸೇರಿದಂತೆ ವಿವಿಧ ಅಲಂಕಾರಗಳೊಂದಿಗೆ ರಥೋತ್ಸವ ಕಾರ್ಯಕ್ರಮ ನಡೆಯಿತು.

 ಇದೇ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರು ಕಾಂಗ್ರೆಸ್ ಮುಖಂಡರು ರಮೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರನ್ನೊಳಗೊಂಡ ತಂಡದಿಂದ ರಥೋತ್ಸವಕ್ಕೆ ಆಗಮಿಸಿದ್ದ ಸದ್ಭಕ್ತರಿಗೆ ಸುಮಾರು ಐದು ಸಾವಿರಕ್ಕೂ  ಹೆಚ್ಚಿನ ಭಕ್ತರು  ಅನ್ನದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಅಗರ ನಿವಾಸಿಗಳು ಸುತ್ತಮುತ್ತಲ ಗ್ರಾಮಸ್ಥರು ಸಾವಿರಾರು ಭಕ್ತಾದಿಗಳು ಲಕ್ಷ್ಮೀ ವೆಂಕಟರಮಣ ಸ್ವಾಮಿ ರಥೋತ್ಸವಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಂ ಸತೀಶ್ ರೆಡ್ಡಿ ರಾಜ್ಯಸಭಾ ಸದಸ್ಯ ಡಿ ಕುಪೇಂದ್ರ ರೆಡ್ಡಿ ಸೇರಿ ಹಲವಾರು ರಾಜಕಾರಣಿಗಳು ಸಹ ಭಾಗವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಅದ್ಧೂರಿಯಾಗಿ ನಡೆದ  ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿ ಅವಘಡ ಹಾಗೂ ಸಾರ್ವಜನಿಕರಿ ತೊಂದರೆಯಾಗದAತೆ ಸೂಕ್ತ ಪೊಲೀಸ್ ಭದ್ರತೆಯನ್ನು ಎಚ್‌ಎಸ್‌ಆರ್ ಲೇಔಟ್ ಇನ್ಸ್ಪೆಕ್ಟರ್ ರಾಘವೇಂದ್ರ ಕಲ್ಪಿಸಿದ್ದರು

ಈ ಸಂದರ್ಭದಲ್ಲಿ ಅಗರ ಕಾಂಗ್ರೆಸ್ ಘಟಕದ ವತಿಯಿಂದ ಕಾರ್ಯಕರ್ತರಾದ ಚಿಕ್ಕಣ್ಣ,ವೆಂಕಟರಮಣಪ್ಪ, ಮಂಜುನಾಥ್ ರೆಡ್ಡಿ, ರಾಮರೆಡ್ಡಿ, ಸುರೇಂದ್ರಬಾಬು, ಸಂಪತ್ ಕುಮಾರ್, ಮುಂತಾದ ಗಣ್ಯಾತಿಗಣ್ಯರು ಮುಖಂಡರುಗಳು ಸೇರಿ ವ್ಯವಸ್ಥಿತವಾಗಿ ಅನ್ನದಾಸೋಹ ಕಲ್ಪಿಸಿದ್ದರು. ನಿವೃತ್ತ ನ್ಯಾಯಾದೀಶ ಶ್ರೀನಿವಾಸ ರೆಡ್ಡಿ ಅನ್ನದಾನ ಕಾರ್ಯಕ್ರ ಮದಲ್ಲಿ ಭಾಗವಹಿಸಿದ್ದರು.

Related