ಅಧಿವೇಶನದಲ್ಲಿ ಕೆಂಡ ಕೆಂಡಮಂಡಲವಾದ ಲಕ್ಷ್ಮಣ್ ಸವದಿ

ಅಧಿವೇಶನದಲ್ಲಿ ಕೆಂಡ ಕೆಂಡಮಂಡಲವಾದ ಲಕ್ಷ್ಮಣ್ ಸವದಿ

ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಇಂದಿಗೆ ಮೂರು ದಿನ ತುಂಬುತ್ತಾ ಬಂದಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡು ಬೇಕು ಎಂದು ಕಾಂಗ್ರೆಸ್‌ ನ ಶಾಸಕ ಲಕ್ಷ್ಮಣ್ ಸವದಿ ಅವರು ಯು ಟಿ ಖಾದರ್ ವಿರುದ್ಧ ಮಾತಿನ ಚಕಮಕ್ಕೆ ನಡೆಸಿದ್ದಾರೆ.

ಹೌದು, ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ ರೊಚ್ಚಿಗೆದ್ದಿದ್ದರು. ಅವರ ದೂರು ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಡೆಸುವ ಉದ್ದೇಶದ ಬಗ್ಗೆ ಆಗಿತ್ತು. ಬೆಂಗಳೂರಿನಲ್ಲಿ ಅಧಿವೇಶನ ನಡೆದಾಗ ಉತ್ತರ ಕರ್ನಾಟಕ ಸಮಸ್ಯೆಗಳು ಕಡೆಗಣಿಸಲ್ಪಡುತ್ತವೆ, ಈ ಭಾಗಕ್ಕೆ ವಿಧಾನಸಭೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕರೂ ಸಮಸ್ಯೆಗಳು ಮಾತ್ರ ಚರ್ಚೆಗೆ ಬಾರದೆ ಹಾಗೆಯೇ ಉಳಿದುಬಿಡುತ್ತವೆ. ಉತ್ತರ ಭಾಗದ ನಾಯಕರು ದೂರಿದ ಕಾರಣ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾಗಿ ಚಳಿಗಾಲದ ಅಧಿವೇಶನ ನಡೆಸುವುದು ಶುರುವಾಯಿತು.

ಬೆಂಗಳೂರು ಅಭಿವೃದ್ಧಿಯನ್ನು ಚರ್ಚಿಸಲು ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಿ ಅಂತ ಅವರು ಸ್ಪೀಕರ್ ಯುಟಿ ಖಾದರ್ ಮೇಲೆ ಒತ್ತಡ ಹಾಕಿದರು.

Related