ಬೆಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ​​

  • In State
  • August 18, 2022
  • 185 Views
ಬೆಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ​​

ಬೆಂಗಳೂರು: ಬೆಂಗಳೂರಿನ ಇಸ್ಕಾನ್​ ದೇಗುಲದಲ್ಲಿ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಇಂದು ಮತ್ತು ನಾಳೆ ವಿಶೇಷ ಆಚರಣೆ ನಡೆಸಲಾಗುತ್ತಿದೆ.

ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಆಚರಿಸಲಾಗುವುದು. ಮನೆ-ಮನಗಳಲ್ಲಿ ಕೃಷ್ಣನ ಧ್ಯಾನ ನಡೆಸಲಾಗುವುದು.

ಇನ್ನು ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಸಹ ಕೃಷ್ಣನಿಗೆ ಮೀಸಲಾದ ವಿವಿಧ ವಿಷ್ಣು ದೇಗುಲಗಳಲ್ಲಿ ಜನ್ಮಾಷ್ಠಮಿಯ ಸಂಭ್ರಮ ನಡೆಯುತ್ತಿದೆ. ಕೃಷ್ಣನಿಗೆ ವಿವಿಧ ಅಲಂಕಾರ ನಡೆಸಿ, ಗೋಕುಲಾಷ್ಠಮಿಯ ಸಂಭ್ರಮ ಹೆಚ್ಚಿಸಲಾಗಿದೆ.

ಇಸ್ಕಾನ್​ ದೇಗುಲದಲ್ಲಿ ಜನ್ಮಾಷ್ಠಮಿ ಅಂಗವಾಗಿ ಇಂದು ಮತ್ತು ನಾಳೆ ವಿವಿಧ ಕಾರ್ಯಕ್ರಮಗಳನ್ನು ಕೂಡ ಏರ್ಪಡಿಸಲಾಗಿದೆ.

ಈ ಹಿನ್ನಲೆ ಭಕ್ತರ ದಂಡು ಕೂಡ ದೇವಾಲಯದತ್ತ ಹರಿದು ಬಂದಿದೆ. ಕೃಷ್ಣನ ವಿವಿಧ ಅಲಂಕಾರಗಳನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಅಸಂಖ್ಯತ ಭಕ್ತರಿಗೆ ಸಿಹಿ ವಿತರಣೆ ಕೂಡ ನಡೆಸಲಾಗಿದೆ.

 

Related