ಕೋಟಿ ರಾಮಾಯಣ, ಮಹಾಭಾರತ ಪುಸ್ತಕಗಳ ಅಭಿಯಾನ

ಕೋಟಿ ರಾಮಾಯಣ, ಮಹಾಭಾರತ ಪುಸ್ತಕಗಳ ಅಭಿಯಾನ

ಬೆಂಗಳೂರು: ಕಳೆದ 5 ವರುಷಗಳಿಂದ ದಿವಂಗತ ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ರಚಿಸಿದ 800 ಪುಟಗಳ ಶ್ರೀ ರಾಮಕಥಾಮಂಜರಿ (ಸಂಪೂರ್ಣ ರಾಮಾಯಣ) 800 ಪುಟಗಳ ಶ್ರೀ ಕೃಷ್ಣ ಕಥಾಮಂಜರಿ (ಸಂಪೂರ್ಣ ಮಹಾಭಾರತ) ಕನ್ನಡ ಗದ್ಯ ಕಾವ್ಯಗಳ ಅಭಿಯಾನವನ್ನು ಮಾಡುತ್ತ ಬಂದಿದ್ದೇವೆ ಎಂದು ಕುಂಟಿಕಾನಮಠ ಬಾಲಕೃಷ್ಣ ಭಟ್  ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕುಮಾರ್ ಅವರು ಹೇಳಿದ್ದಾರೆ.

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕೋಟಿ ರಾಮಾಯಣ, ಮಹಾಭಾರತ ಪುಸ್ತಕ ಬಿಡುಗಡೆ ಅಭಿಯಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಅಭಿಯಾನಕ್ಕೆ ಶೃಂಗೇರಿ ಭಾರತೀ ತೀರ್ಥ ಮಹಾಸ್ವಾಮಿಗಳು, ಶ್ರೀ ಯೆಡಿಯೂರಪ್ಪನವರು, ದೇವೇಗೌಡರು, ದತ್ತಾತ್ರೇಯ ಹೊಸಬಾಳೆ, ದೊಡ್ಡರಂಗೇಗೌಡರು, ಡಿ ಕೆ ಶಿವಕುಮಾರ್, ವಿಜಯೇಂದ್ರ ಮೊದಲಾದ ಗಣ್ಯರು ಉತ್ತೇಜನವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

ಅದರ ಮುಂದುವರಿದ ಭಾಗವಾಗಿ ಕರ್ನಾಟಕ ಮತ್ತು ಭಾರತದ ಓದುಗರನ್ನು ತಲುಪುವ ಉದ್ದೇಶದಿಂದ ಕೋಟಿ ರಾಮಾಯಣ ಮಹಾಭಾರತ ಪುಸ್ತಕಗಳ ಅಭಿಯಾನವನ್ನು ಹಾಕಿಕೊಂಡಿದ್ದೇವೆ.

ಕರ್ನಾಟಕದಲ್ಲಿ ರಾಮಕಥಾಮಂಜರಿ, ಕೃಷ್ಣ ಕಥಾಮಂಜರಿ ಜೊತೆಯಲ್ಲಿ ಇತರ ಲೇಖಕರು ರಚಿಸಿದ ರಾಮಾಯಣ ಮಹಾಭಾರತಗಳನ್ನು ಕೂಡ ಪ್ರಯೋಜಕತ್ವದೊಂದಿಗೆ ಲಕ್ಷಾಂತರ ಓದುಗರನ್ನು ತಲುಪಲಿದ್ದೇವೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಕೂಡ ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್, ಮರಾಠಿ ಮೊದಲಾದ ಭಾಷೆಗಳಲ್ಲಿ ರಚಿಸಲ್ಪಟ್ಟ ಉತ್ತಮ ರಾಮಾಯಣ ಮಹಾಭಾರತ ಪುಸ್ತಕಗಳನ್ನು ಓದುಗರಿಗೆ ತಲುಪಿಸಿಲಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

Related