ಥಿಯೇಟರ್ ಅಂಗಳದಲ್ಲಿ ಕೋಮಲ್ ಕಾಮಿಡಿ ಕಿಕ್

ಥಿಯೇಟರ್ ಅಂಗಳದಲ್ಲಿ ಕೋಮಲ್ ಕಾಮಿಡಿ ಕಿಕ್

ಬೆಂಗಳೂರು: ಕೋಮಲ್ ಎಂದ್ರೆ ಕಾಮಿಡಿ. ಕೋಮಲ್ ಅಂದ್ರೆ ನಗೆ ಪಟಾಕಿ. ಹೌದು ಸ್ಯಾಂಡಲ್ ವುಡ್ ನಲ್ಲಿ ಕಾಮಿಡಿಯಂದ ಕ್ಷಣ ನೆನಪಾಗುವುದು ಕೋಮಲ್ ಅವರು.

ಕೋಮಲ್ ಅವರು ಬಹಳ ವರ್ಷಗಳ ನಂತರ ಮತ್ತೆ ಬೆಳ್ಳಿ ತೆರೆಯ ಮೇಲೆ ಮಿಂಚುತ್ತಿದ್ದಾರೆ. ಅವರು ನಟನೆ ಮಾಡಿರುವಂತಹ ನಮೋ ಭೂತಾತ್ಮ 2 ಸಿನಿಮಾ ಎಲ್ಲ ಪ್ರೇಕ್ಷಕರ ಮನ ಗೆದ್ದಿದೆ.

ಹೌದು, ಸ್ಯಾಂಡಲ್ವುಡ್ ಬೆಳ್ಳಿತೆರೆ ಮೇಲೆ ಕಾಮಿಡಿ ಕಿಂಗ್ ಕೋಮಲ್ ಕಮಾಲ್ ಮಾಡಿ ನಾಲ್ಕು ವರ್ಷ ಕಳೆದಿದೆ. ಕೆಂಪೇಗೌಡ 2 ಕೋಮಲ್ ನಟನೆಯ ಕೊನೆ ಸಿನಿಮಾವಾಗಿತ್ತು. ಇದೀಗ ಕೋಮಲ್ ನಟನೆಯ ನಮೋ ಭೂತಾತ್ಮ2 ಸಿನಿಮಾ  ಶುಕ್ರವಾರ ಬಿಡುಗಡೆಯಾಗಿದ್ದು, ಇದರ ಬಗ್ಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ.

ಇದೀಗ ಮತ್ತೆ ಥಿಯೇಟರ್ ಅಂಗಳದಲ್ಲಿ ಕೋಮಲ್ ಕಾಮಿಡಿ ಕಿಕ್ ಕೊಡೋದಕ್ಕೆ ಬರ್ತಿದ್ದಾರೆ. ನಮೋ ಭೂತಾತ್ಮ2 ಸಿನಿಮಾ ಮೂಲಕ ಈ ಭಾರಿ ಹಾರರ್ ಕಮ್ ಕಾಮಿಡಿ ಥ್ರಿಲ್ ಕೊಟ್ಟಿದ್ದಾರೆ ಕೋಮಲ್. ಸೂಪರ್ ಹಿಟ್ ಹಾಡುಗಳ ಕೊರಿಯಾಗ್ರಾಫರ್ ಮುರಳಿ ಮಾಸ್ಟರ್ ನಮೋ ಭೂತಾತ್ಮ 2 ಸಿನಿಮಾವನ್ನು ಸ್ವತಃ ನಿರ್ದೇಶಿಸಿ ನಿರ್ಮಿಸಿದ್ದಾರೆ.

 

Related