ತಹಶೀಲ್ದಾರ್‍ಗೆ ಚಾಕು ಇರಿತ; ಸಾವು

ತಹಶೀಲ್ದಾರ್‍ಗೆ ಚಾಕು ಇರಿತ; ಸಾವು

ಕೋಲಾರ: ಸರ್ವೇ ನಡೆಸಲು ಹೋದ ತಹಶೀಲ್ದಾರ್ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಂಗಾರಪೇಟೆಯ ಚಂದ್ರಮೌಳೇಶ್ವರ ಚಾಕು ಇರಿತಕ್ಕೆ ಒಳಗಾದ ತಹಶೀಲ್ದಾರ್, ಆರೋಪಿ ನಿವೃತ್ತ ಶಿಕ್ಷಕ ವೆಂಕಟಾಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಹಶೀಲ್ದಾರ್ ಚಂದ್ರಮೌಳೇಶ್ವರ ಅವರು ಸರ್ಕಾರದ ಜಾಗವನ್ನು ಸರ್ವೇ ನಡೆಸಲು ಹೋದಾಗ ಈ ದುರ್ಘಟನೆ ನಡೆದಿದೆ.

ಗಂಭೀರವಾಗಿ ಗಾಯಗೊಂಡ ತಹಶೀಲ್ದಾರ್ ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related