ಕೊಡಗು ಜಿಲ್ಲೆಗೆ ಸಿಕ್ತು ವಿಶ್ವದ ಪ್ರಮುಖ ಸ್ಥಾನ!?

ಕೊಡಗು ಜಿಲ್ಲೆಗೆ ಸಿಕ್ತು ವಿಶ್ವದ ಪ್ರಮುಖ ಸ್ಥಾನ!?

ಕೊಡಗು: ನಮ್ಮ ಕರ್ನಾಟಕ ರಾಜ್ಯ, ನಮ್ಮ ದೇಶ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಪ್ರವಾಸಿಗರ ತಾಣದಲ್ಲಿ ಹೆಸರುವಾಸಿಯಾಗಿದೆ.

ಅದರಲ್ಲೂ ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಮೈತುಂಬಿ ಹರಿಯುತ್ತಿರುವ ಜಲಪಾತಗಳು, ಎಲ್ಲೆಲ್ಲಿ ನೋಡಿದರಲ್ಲಿ ಹಸಿರು ಈ ಹಸಿರಿನಲ್ಲಿ ಹಕ್ಕಿಪಿಕ್ಕಿಗಳ ಕಲರವ, ಕಾಡು ಪ್ರಾಣಿಗಳ ಗುದ್ದಾಟ ಇವೆಲ್ಲವೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವಂತೆ ಮಾಡುತ್ತವೆ.

ಕೊಡಗು ಜಿಲ್ಲೆ ಅತಿ ಹೆಚ್ಚು ಹಸಿರು ಹೊಂದಿರುವ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ಸುಮಾರು 18ಕ್ಕೂ ಹೆಚ್ಚು ಪ್ರವಾಸಿಗರ ತಾಣವಿದ್ದು ಈ ಪ್ರವಾಸಿಗರ ತಾಣಕ್ಕೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಿಂದ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಿದ್ದಾರೆ.

ಕರ್ನಾಟಕದ ಈ ಕಾಶ್ಮೀರಕ್ಕೆ ಇನ್ನೊಂದು ಹೆಗ್ಗಳಿಕೆಯ ವಿಷಯವೆಂದರೆ, ವಿಶ್ವದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಕೊಡಗು, 7ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮನ್ನಣೆಯು ಜಿಲ್ಲೆಯ ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಜನಪ್ರಿಯ ಆಕರ್ಷಣೆಗಳಿಗೆ ಸಾಕ್ಷಿಯಾಗಿದೆ.

ಜಾಗತಿಕ ಪ್ರವಾಸಿತಾಣಗಳ ಪಟ್ಟಿಯಲ್ಲಿ ಗೋವಾ, ಬಾಲಿ, ಶ್ರೀಲಂಕಾ, ಥೈಲ್ಯಾಂಡ್, ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್, ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂಥಾ ಪ್ರಸಿದ್ಧ ಸ್ಥಳಗಳ ಹೆಸರಿದೆ. ಈ ಪಟ್ಟಿಯಲ್ಲಿ ಕೊಡಗು ಏಳನೇ ಸ್ಥಾನವನ್ನು ಪಡೆದುಕೊಂಡಿದೆ.  ಮಾತ್ರವಲ್ಲ, 2023ರಲ್ಲಿ, ಜಿಲ್ಲೆಯು ಭಾರತೀಯರಿಂದ ಹೆಚ್ಚು ಹುಡುಕಲ್ಪಟ್ಟ ಪ್ರವಾಸಿ ತಾಣಗಳಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.

 

Related